ಈ ರಾಜ್ಯದ ಜಿಲ್ಲಾಸ್ಪತ್ರೆ ಬೀದಿ ನಾಯಿಗಳಿಗೆ ಆಶ್ರಯತಾಣ!

Update: 2021-01-14 13:33 GMT
ಫೋಟೊ ಕೃಪೆ: ಎ ಎನ್ ಐ

ಮೊರಾದಾಬಾದ್: ಉತ್ತರಪ್ರದೇಶದ ಮೊರಾದಾಬಾದ್  ಜಿಲ್ಲಾಸ್ಪತ್ರೆ ಬೀದಿ ನಾಯಿಗಳ ಆಶ್ರಯತಾಣವಾಗಿಬಿಟ್ಟಿದೆ. ಆಸ್ಪತ್ರೆಯೊಳಗೆ ಬೇಕಾಬಿಟ್ಟಿ ಬಿಸಾಡಿರುವ ಕಸದ ರಾಶಿಯಲ್ಲಿ ಆಹಾರ ಹುಡುಕುತ್ತಾ ಬರುವ ನಾಯಿಗಳು ಆಸ್ಪತ್ರೆಯ ರೋಗಿಗಳು  ಮಲಗುವ ಬೆಡ್ ಮೇಲೆ ಮಲಗಿಕೊಂಡಿರುತ್ತವೆ.

ಆಸ್ಪತ್ರೆಯ ರೋಗಿಗಳು ನಾಯಿಯ  ಭೀತಿಯ ಬಗ್ಗೆ ದೂರನ್ನು ನೀಡಿದ್ದಾರೆ.

ಭದ್ರತಾ ಸಿಬ್ಬಂದಿಗಳು ಗೇಟ್ ನಲ್ಲಿ ಅಜಾಗರೂಕತೆಯಿಂದ ಕುಳಿತುಕೊಂಡಿರುವಾಗ ವಾರ್ಡ್ ಗಳ ಒಳಗೆ ಪ್ರವೇಶಿಸುವ ನಾಯಿಗಳು, ರೋಗಿಗಳು ಮಲಗಬೇಕಾಗಿರುವ ಬೆಡ್ ಮೇಲೆ ಮಲಗುತ್ತವೆ. ರೋಗಾಣುಗಳನ್ನು ಹರಡುತ್ತಿವೆ. ನಾಯಿಗಳ ತಮ್ಮನ್ನು ಕಚ್ಚಬಹುದೆಂಬ ಭೀತಿಯಲ್ಲಿ ರೋಗಿಗಳಿದ್ದಾರೆ ಎಂದು ಓರ್ವ ರೋಗಿ ಎ ಎನ್ ಐಗೆ ತಿಳಿಸಿದ್ದಾರೆ.

ಮುರಾದಾಬಾದ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಎಂಎಸ್ ಗರ್ಗ್ ಎಎನ್ ಐಯೊಂದಿಗೆ ಮಾತನಾಡುತ್ತಾ, ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ನಾಯಿಗಳು ಭೀತಿ ಹುಟ್ಟಿಸುತ್ತಿವೆ ಎಂಬ ವಿಚಾರ ತಿಳಿದು ನಿಜಕ್ಕೂ ಬೇಸರವಾಯಿತು.  ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಾವು ತಿಳಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News