ಈ ವರ್ಷದ ಗಣರಾಜ್ಯೋತ್ಸವ ಪರೇಡ್ ಗೆ ವಿದೇಶಿ ಅತಿಥಿಗಳಿಲ್ಲ:ವಿದೇಶಾಂಗ ಸಚಿವಾಲಯ

Update: 2021-01-14 18:41 GMT

 ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಈ ವರ್ಷದ ಗಣರಾಜ್ಯೋತ್ಸವದಿನದಂದು ವಿದೇಶಿ ನಾಯಕರು ಮುಖ್ಯ ಅತಿಥಿಯಾಗಿ  ಭಾಗವಹಿಸುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಗುರುವಾರ ಪ್ರಕಟಿಸಿದೆ.

5 ದಶಕಗಳ ಬಳಿಕ ಮೊದಲ ಬಾರಿ ದೇಶದ ಗಣರಾಜ್ಯೋತ್ಸವ ಪರೇಡ್ ನಲ್ಲಿ ವಿದೇಶದ ಮುಖ್ಯ ಅತಿಥಿ ಭಾಗವಹಿಸುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪರಿಸ್ಥಿತಿಯ ಕಾರಣಕ್ಕೆ  ಈ ವರ್ಷ ವಿದೇಶದ ರಾಜ್ಯದ ಮುಖ್ಯಸ್ಥರು ಅಥವಾ ಸರಕಾರದ ಮುಖ್ಯಸ್ಥರಿಗೆ ನಮ್ಮ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸದೆ ಇರಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಪತ್ರಿಕಾಗೋಷ್ಠಿಯಲ್ಲಿ ತಿಳಿಸದರು.

ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ತನ್ನ ಭೇಟಿಯನ್ನು ರದ್ದುಪಡಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತವು ಜಾನ್ಸನ್ ರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನ ನೀಡಿತ್ತು. ಭಾರತದ ಆಹ್ವಾವನ್ನು ಅವರು ಸ್ವೀಕರಿಸಿ ಇದೊಂದು ಮಹಾ ಗೌರವ ಎಂದಿದ್ದರು ಇಂಗ್ಲೆಂಡ್ ನಲ್ಲಿ ಮತ್ತೊಮ್ಮೆ ಕೊರೋನ ಆರ್ಭಟ ಜೋರಾದ ಕಾರಣ ಜಾನ್ಸನ್ ಭಾರತದ ಭೇಟಿಯನ್ನು ರದ್ದುಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News