ಉತ್ತರ ಪ್ರದೇಶ: ಕೋವಿಡ್ ಲಸಿಕೆ ಸ್ವೀಕರಿಸಿದ 24 ಗಂಟೆಗಳ ಬಳಿಕ ಸರಕಾರಿ ನೌಕರ ಮೃತ್ಯು

Update: 2021-01-18 05:34 GMT

ಲಕ್ನೊ: ಕೋವಿಡ್ ಸ್ವೀಕರಿಸಿದ 24 ಗಂಟೆಗಳ ಬಳಿಕ ಉತ್ತರ ಪ್ರದೇಶದ ಮೊರಾದಾಬಾದ್ ನ ಸರಕಾರಿ ಆಸ್ಪತ್ರೆಯ 46ರ ವಯಸ್ಸಿನ ನೌಕರ ರವಿವಾರ ಸಂಜೆ ಮೃತಪಟ್ಟಿರುವುದಾಗಿ ndtv.com ವರದಿ ಮಾಡಿದೆ.

ನೌಕರನ ಸಾವು ಕೊರೋನ ಚುಚ್ಚುಮದ್ದಿಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಕಂಡುಬರುತ್ತಿದೆ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎದೆ ನೋವು ಹಾಗೂ ಉಸಿರಾಟದ ಸಮಸ್ಯೆಯಿದೆ ಎಂದು ಹೇಳಿದ್ದ ವಾರ್ಡ್ ಬಾಯ್ ಮಹಿಪಾಲ್ ಸಿಂಗ್ ಕೊರೋನ ಲಸಿಕೆ ಪಡೆಯುವ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮಹಿಪಾಲ್ ಸಿಂಗ್ ಗೆ ಶನಿವಾರ ಸಂಜೆ ಲಸಿಕೆ ನೀಡಲಾಗಿತ್ತು. ರವಿವಾರ ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಎದೆ ನೋವು ಕಾಣಿಸಿಕೊಂಡಿತ್ತು. ಸಾವಿಗೆ ಕಾರಣ ಏನೆಂಬ ಕುರಿತು ತನಿಖೆ ನಡೆಸುತ್ತಿದ್ದೇವೆ. ನಮಗೆ ಪೋಸ್ಟ್ ಮಾರ್ಟಂ ವರದಿ ಲಭಿಸಿದೆ. ಅದರಲ್ಲಿ ಲಸಿಕೆಯ ಅಡ್ಡಪರಿಣಾಮದ ಕುರಿತು ಗೊತ್ತಾಗಿಲ್ಲ ಎಂದು ಮೊರಾದಾಬಾದ್ ಮುಖ್ಯ ವೈದ್ಯಾಧಿಕಾರಿ ಎಂ ಸಿ ಗರ್ಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News