ಬೋಟು ಮುಳುಗಿ ಐವರು ಪ್ರವಾಸಿಗರು ಮೃತ್ಯು

Update: 2021-01-18 10:12 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್: ಗುಜರಾತ್ ನ ನವಸಾರಿ ಜಿಲ್ಲೆಯ ಸರೋವರವೊಂದರಲ್ಲಿ ದೋಣಿ ಅಪಘಾತಕ್ಕೀಡಾದ ನಂತರ ಮೂವರು ಮಕ್ಕಳು ಹಾಗೂ ಇಬ್ಬರು ವಯಸ್ಕರು ಮೃತಪಟ್ಟಿದ್ದಾರೆ.  ಹೆಚ್ಚಿನ ಪ್ರವಾಸಿಗರು ಬೋಟ್ ನಲ್ಲಿ ಪ್ರಯಾಣಿಸಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವಸರಿಯ ಚಿಖ್ಲಿ ತಾಲೂಕಿನ ಪ್ರವಾಸಿ ತಾಣವಾದ ಸೋಲ್ದರಾ ಇಕೋ ಪಾಯಿಂಟ್ ನಲ್ಲಿರುವ ಸರೋವರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರವಾಸಿಗರು ದೋಣಿಯಲ್ಲಿದ್ದವರು ದಡ ಸೇರುವ ಮೊದಲೇ ದೋಣಿ ಏರಲು ಯತ್ನಿಸಿದಾಗ ದೋಣಿ ಮುಳುಗಿತು. ಇದರ  ಪರಿಣಾಮ 15 ಮಂದಿ ಗಾಯಗೊಂಡಿದ್ದಾರೆ ಎಂದು ಚಿಖ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News