ಪ್ರಧಾನಿಯಾಗಲಿ, ಇನ್ಯಾರೇ ಆಗಲಿ, ನನಗೆ ಯಾರ ಭಯವೂ ಇಲ್ಲ, ಅವರಿಗೆ ನನ್ನನ್ನು ಮುಟ್ಟಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ

Update: 2021-01-19 11:46 GMT

ಹೊಸದಿಲ್ಲಿ,ಜ.19: ಕೃಷಿ ಕ್ಷೇತ್ರವನ್ನು ನಾಶ ಮಾಡಲೆಂದೇ ನೂತನ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ ಎಂದು ರಾಹುಲ್ ಗಾಂಧಿಯವರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಕಿಡಿಕಾರಿದ್ದಾರೆ. ಮೂರ್ನಾಲ್ಕು ಬಂಡವಾಳಶಾಹಿಗಳಿಗೆ ಸಹಾಯ ಮಾಡುವ ಸಲುವಾಗಿ ಸಂಪೂರ್ಣ ಕೃಷಿ ಕ್ಷೇತ್ರವನ್ನೇ ಸರಕಾರ ಹಾಳುಗೆಡವುತ್ತಿದೆ. ನನಗೆ ನರೇಂದ್ರ ಮೋದಿಯಾಗಲೀ, ಇನ್ಯಾರೇ ಆಗಲಿ, ಯಾರ ಭಯವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೃಷಿ ಕ್ಷೇತ್ರವನ್ನು ಸಂಪೂರ್ಣ ನಾಶ ಮಾಡುವ ಸಲುವಾಗಿಯೇ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ನಾನು ಪ್ರತಿಭಟನಾ ನಿರತ ರೈತರಿಗೆ 100% ಬೆಂಬಲ ನೀಡುತ್ತೇನೆ. ದೇಶದ ಪ್ರತಿಯೊಬ್ಬ ನಾಗರಿಕನೂ ಅವರನ್ನು ಬೆಂಬಲಿಸಬೇಕು. ಅವರು ನಮಗಾಗಿ ಹೋರಾಡುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನೂತನ ಕೃಷಿ ಕಾಯ್ದೆಯು ರೈತರನ್ನು ಯಾವ ರೀತಿಯಲ್ಲಿ ಬಾಧಿಸುತ್ತದೆ ಅನ್ನುವುದರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

"ಎಲ್ಲ ರೈತರಿಗೆ ಸತ್ಯವೇನು ಅನ್ನುವುದು ತಿಳಿದಿದೆ. ರಾಹುಲ್ ಗಾಂಧಿ ರೈತರಿಗಾಗಿ ಏನು ಮಾಡುತ್ತಿದ್ದಾರೆ ಅನ್ನುವುದೂ ಅವರಿಗೆ ತಿಳಿದಿದೆ. ನನ್ನ ನಡತೆ ಸರಿಯಾಗಿದೆ. ನಾನು ನರೇಂದ್ರ ಮೋದಿಯಾಗಲಿ, ಇನ್ನಿತರರಾಗಲಿ, ಯಾರಿಗೂ ಹೆದರುವುದಿಲ್ಲ. ಅವರಿಗೆ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ದೂರದಿಂದ ಶೂಟ್ ಮಾಡಬಹುದಷ್ಟೇ. ನಾನು ದೇಶಭಕ್ತ ಮತ್ತು ನಾನು ನನ್ನ ದೇಶವನ್ನು ರಕ್ಷಿಸಲು ಕಟಿಬದ್ಧನಾಗಿದ್ದೇನೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News