ಪ್ರಯಾಣ ನಿರ್ಬಂಧ ತೆರವು: ಟ್ರಂಪ್ ಘೋಷಣೆ

Update: 2021-01-19 17:49 GMT

ವಾಶಿಂಗ್ಟನ್, ಜ. 19: ಯುರೋಪ್ ಮತ್ತು ಬ್ರೆಝಿಲ್‌ನಿಂದ ಅಮೆರಿಕಕ್ಕೆ ಬರುವ ಪ್ರವಾಸಿಗರ ಮೇಲೆ ವಿಧಿಸಲಾಗಿರುವ ಕೋವಿಡ್-19 ಸಂಬಂಧಿ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಅವೆುರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ನೀಡಿರುವ ಪ್ರಕಟನೆಯನ್ನು ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ವಕ್ತಾರೆಯೊಬ್ಬರು ತಳ್ಳಿಹಾಕಿದ್ದಾರೆ.

‘‘ನಮ್ಮ ವೈದ್ಯಕೀಯ ತಂಡದ ಸಲಹೆಯಂತೆ, ನಮ್ಮ ಸರಕಾರವು ಜನವರಿ 26ರಂದು ಈ ನಿರ್ಬಂಧಗಳನ್ನು ತೆರವುಗೊಳಿಸುವ ಉದ್ದೇಶವನ್ನು ಹೊಂದಿಲ್ಲ’’ ಎಂದು ಬೈಡನ್‌ರ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಟ್ವೀಟ್ ಮಾಡಿದ್ದಾರೆ.

‘‘ವಾಸ್ತವಿಕವಾಗಿ, ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ಇನ್ನಷ್ಟು ತಡೆಯುವ ಉದ್ದೇಶದಿಂದ ಅಂತರ್‌ರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ’’ ಎಂದು ಅವರು ಹೇಳಿದರು.

ಸಾಕಿಯ ಟ್ವೀಟ್‌ಗಿಂತ ಕೆಲವೇ ನಿಮಿಷಗಳ ಮೊದಲು, ಯುರೋಪ್ ಮತ್ತು ಬ್ರೆಝಿಲ್ ಮೇಲೆ ವಿಧಿಸಲಾಗಿರುವ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸುವುದಾಗಿ ನಿರ್ಗಮನ ಅಧ್ಯಕ್ಷ ಟ್ರಂಪ್ ಹೇಳಿಕೆಯೊಂದರಲ್ಲಿ ತಿಳಿಸಿದ್ದರು. ಚೀನಾ ಮತ್ತು ಇರಾನ್ ಮೇಲಿನ ಪ್ರಯಾಣ ನಿಷೇಧ ಮುಂದುವರಿಯುವುದು ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News