ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಪ್ರಮಾಣವಚನ

Update: 2021-01-20 17:07 GMT
Photo: twitter.com/DebHaalandNM

ವಾಶಿಂಗ್ಟನ್: ವಾಶಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಬಿಲ್ಡಿಂಗ್ ನ ವೆಸ್ಟ್ ಫ್ರಂಟ್ ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಮೆರಿಕದ ಸುಪ್ರೀಂಕೋರ್ಟಿ ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್  ಪ್ರಮಾಣವಚನ ಬೋಧಿಸಿದರು.

ಇದೇ ವೇಳೆ, ಭಾರತೀಯ-ಅಮೆರಿಕನ್ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ತಮಿಳುನಾಡು  ಮೂಲದವರಾಗಿರುವ ಕಮಲಾಗೆ ನ್ಯಾಯಮೂರ್ತಿ ಸೋನಿಯಾ ಸೊಟೊಮಯೊರ್ ಪ್ರಮಾಣವಚನ ಬೋಧಿಸಿದರು. ಕಮಲಾ ಅವರು ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಮೊದಲ ಮಹಿಳೆ, ಮೊದಲ ಕಪ್ಪುವರ್ಣದ ಮಹಿಳೆ, ಮೊದಲ ದಕ್ಷಿಣ ಏಶ್ಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದರು.

“ಅಮೆರಿಕಕ್ಕೆ ಇಂದು ಹೊಸ ದಿನ’ ಎಂದು ಕಾರ್ಯಕ್ರಮಕ್ಕೆ ಮೊದಲು ಬೈಡನ್ ಟ್ವೀಟ್ ಮಾಡಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪ್ರದಾಯವನ್ನು ಮುರಿದರು. ಪ್ರಮಾಣವಚನದಲ್ಲಿ ನಿರ್ಗಮನ ಅಧ್ಯಕ್ಷರು ಭಾಗವಹಿಸುವುದು ಈ ತನಕ ಪಾಲಿಸಿಕೊಂಡು ಬಂದಿರುವ ಸಂಪ್ರದಾಯವಾಗಿತ್ತು. ಸಮಾರಂಭದಲ್ಲಿ ಬರಾಕ್ ಒಬಾಮ, ಬಿಲ್ ಕ್ಲಿಂಟನ್, ಜಾರ್ಜ್ ಬುಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News