ಪ್ರಧಾನಿ, ರಾಜಕಾರಣಿಗಳು ಲಸಿಕೆ ತೆಗೆದುಕೊಳ್ಳುವಂತೆ ವೈದ್ಯರ ಆಗ್ರಹ

Update: 2021-01-21 17:09 GMT

ಹೊಸದಿಲ್ಲಿ, ಜ. 21: ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ರಾಜಕಾರಣಿಗಳು ಕೋವಿಡ್ 19 ಲಸಿಕೆ ತೆಗೆದುಕೊಳ್ಳುವಂತೆ ಉನ್ನತ ವೈದ್ಯರು ಆಗ್ರಹಿಸಿದ್ದಾರೆ. ಕೋವಿಡ್ ಲಸಿಕೆ ತೆಗೆದುಕೊಳ್ಳಲು ರಾಜಕಾರಣಿಗಳು ಹಾಗೂ ಸಂಸದೀಯ ಪಟುಗಳು ಮುಂದೆ ಬರುವ ಹಾಗೂ ಕೋವ್ಯಾಕ್ಸಿನ್‌ನ ಪರಿಣಾಮ, ಸುರಕ್ಷೆ ಬಗ್ಗೆ ಸರಕಾರ ದತ್ತಾಂಶ ಬಿಡುಗಡೆ ಮಾಡುವವರೆಗೆ ಈ ಹಿಂಜರಿಕೆ ಮುಂದುವರಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.

ಇತರ ದೇಶಗಳಲ್ಲಿ ಜನರಲ್ಲಿ ಆತ್ಮಸ್ಥೆರ್ಯ ಮೂಡಿಸಲು ರಾಜಕಾರಣಿಗಳು ಹಾಗೂ ರಾಷ್ಟ್ರದ ಮುಖ್ಯಸ್ಥರು ಲಸಿಕೆ ತೆಗೆದುಕೊಳ್ಳುತ್ತಾರೆ ಎಂದು ಏಮ್ಸ್‌ನ ನಿವಾಸಿ ವೈದ್ಯರ ಸಂಘಟನೆ ಅಧ್ಯಕ್ಷ ಆದರ್ಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ. ‘‘ದುರಾದೃಷ್ಟವೆಂದರೆ, ಪ್ರಧಾನಿ, ರಾಷ್ಟ್ರಪತಿ, ಆರೋಗ್ಯ ಸಚಿವರು ಸೇರಿದಂತೆ ಯಾವುದೇ ರಾಜಕಾರಣಿ ಲಸಿಕೆ ತೆಗೆದುಕೊಳ್ಳಲು ಮುಂದೆ ಬಂದಿರುವುದನ್ನು ನಾನು ಕೇಳಿಲ್ಲ. ಅವರು ಯಾಕೆ ಲಸಿಕೆ ತೆಗೆದುಕೊಳ್ಳುತ್ತಿಲ್ಲ ?’’ ಎಂದು ಅವರು ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್, ಮಾಜಿ ಉಪಾಧ್ಯಕ್ಷೆ ಮೈಕ್ ಪೆನ್ಸ್, ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ, ಸಿಂಗಪುರದ ಪ್ರಧಾನಿ ಲೀ ಹ್ಸೈನ್ ಲೂಂಗ್, ಯುಎಇ ಪ್ರಧಾನಿ ಶೇಕ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಹಾಗೂ ಇತರರು ಲಸಿಕೆ ತೆಗೆದುಕೊಂಡಿದ್ದಾರೆ. ನಮ್ಮ ರಾಜಕಾಕಾರಣಿಗಳು ಲಸಿಕೆ ತೆಗೆದುಕೊಂಡಿಲ್ಲ ಯಾಕೆ ? ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News