ಬಾಗಲಕೋಟೆ:ಎರಡೂವರೆ ಲಕ್ಷ ವರ್ಷ ಪ್ರಾಚೀನ ಶಿಲಾಯುಗದ ಉಪಕರಣ ತಯಾರಿಕೆ ಶಾಲೆ ಪತ್ತೆ

Update: 2021-01-23 18:37 GMT
ಫೋಟೊ ಕೃಪೆ: newindianexpress

ಬಾಗಲಕೋಟೆ, ಜ. 23: ಜಿಲ್ಲೆಯ ಬಾದಾಮಿ ಸಮೀಪದ ತಮಿನಾಳ ಗ್ರಾಮದಲ್ಲಿರುವ ಗುಡ್ಡದಲ್ಲಿ ಎರಡೂವರೆ ಲಕ್ಷ ವರ್ಷ ಪ್ರಾಚೀನ ಶಿಲಾಯುಗದ ಕಲ್ಲಿನ ಉಪಕರಣಗಳನ್ನು ತಯಾರಿಸುವ ಘಟಕವೊಂದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಪತ್ತೆ ಹಚ್ಚಿದೆ.

ತಮಿನಾಳ ಹಾಗೂ ಕಾಥರಕಿ ಗ್ರಾಮದ ನಡುವೆ ಇರುವ ರಂಗನಾಥ ಬೆಟ್ಟದಲ್ಲಿ ಉತ್ಖನನ ನಡೆಸುತ್ತಿದ್ದ ನಾಗಪುರದ ಇತಿಹಾಸ ಪೂರ್ವ ಶಾಖೆಯ ನಾಲ್ವರು ಸದಸ್ಯರ ತಂಡ ಈ ಘಟಕವನ್ನು ಪತ್ತೆ ಹಚ್ಚಿದೆ. ‘‘ಮಲಪ್ರಭಾ ನದಿಯ ದಂಡೆಯಲ್ಲಿ ಇರುವ ಸಣ್ಣ ಬೆಟ್ಟದಲ್ಲಿ ಶಿಲಾಯುಗದ ಸಂದರ್ಭ ಬಳಕೆ ಮಾಡುತ್ತಿದ್ದ ವಿವಿಧ ಶಿಲಾ ಉಪಕರಣಗಳು ಪತ್ತೆಯಾಗಿವೆ’’ ಎಂದು ಪುರಾತತ್ವ ಅಧೀಕ್ಷಕ ರಮೇಶ್ ಮುಳಿಮನಿ ಹೇಳಿದ್ದಾರೆ. ರಂಗನಾಥಬೆಟ್ಟದಲ್ಲಿ ತಾಮ್ರದ ಮೇಲೆ ಕೆತ್ತುವ ಉಪಕರಣ, ಉಜ್ಜುವ ಸಾಧನ, ಮರ-ಲೋಹ ಕೆತ್ತನೆಯ ಸಾಧನ, ಕೈ ಮಚ್ಚು ಮೊದಲಾದ ಉಪಕರಣಗಳು ಪತ್ತೆಯಾಗಿವೆ. ಈ ಉತ್ಖನನದ ಬಳಿಕ ಇನ್ನಷ್ಟು ಪರಿಶೋಧನೆ, ಉತ್ಖನನ ಹಾಗೂ ಸಂಶೋಧನೆಯ ದಾಖಲೀಕರಣಕ್ಕೆ ಅನುಮತಿ ಕೋರಲು ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News