ಸುಭಾಷ್ ಚಂದ್ರ ಬೋಸ್ ಬದಲು ಅವರ ಪಾತ್ರದಲ್ಲಿ ನಟಿಸಿದ್ದ ಸಿನಿಮಾ ನಟನ ಫೋಟೊ ಅನಾವರಣ ಮಾಡಿದ್ದಾರೆಯೇ ರಾಷ್ಟ್ರಪತಿ?

Update: 2021-01-25 10:15 GMT

ಹೊಸದಿಲ್ಲಿ,ಜ.25: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೆ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಸುಭಾಷ್ ಚಂದ್ರ ಬೋಸ್ ರ ಭಾವಚಿತ್ರದ ಬದಲು ಸಿನಿಮಾ ನಟ ಪ್ರಸೇನ್ ಜಿತ್ ಚಟರ್ಜಿ ಭಾವಚಿತ್ರ ಬಿಡುಗಡೆ ಮಾಡಿದ್ದಾರೆಂದು ಟ್ವಿಟರ್ ನಾದ್ಯಂತ ಸುದ್ದಿಯಾಗುತ್ತಿದೆ. 

ಟ್ವಿಟರ್ ನಲ್ಲಿ ಈ ಕುರಿತು ಬರೆದಿರುವ ಬಂಗಾಳದ ರಾಜಕೀಯ ವಿಶ್ಲೇಷಕ ಆದಿಲ್ ಹುಸೈನ್, "ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ರಾಷ್ಟ್ರಪತಿ ಭವನದಲ್ಲಿ ನೇತಾಜಿಯ ಫೋಟೊವನ್ನು ಅನಾವರಣಗೊಳಿಸಿದ್ದಾರೆ. ಆದರೆ ಅದು ನೇತಾಜಿಯ ಭಾವಚಿತ್ರವಲ್ಲ. ಅದು ಪ್ರಸೇನ್ ಜಿತ್ ಚಟರ್ಜಿ (ಬುಂಬಡ) ರವರು ನೇತಾಜಿಯಾಗಿ ಅಭಿನಯಿಸಿದ ಸಿನಿಮಾದ ಚಿತ್ರದ ಫೋಟೊ. ಶ್ರೀಜಿತ್ ಮುಖರ್ಜಿಯವರು ನಿರ್ದೇಶಿಸಿದ ಗುಮ್ನಾಮಿ ಚಿತ್ರದ ಫೋಟೊ ಇದು" ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಅನ್ನು ಸಾಮಾಜಿಕ ಹಾಗೂ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ರಿಟ್ವೀಟ್ ಮಾಡಿದ್ದು,"ಇದು ಮುಜುಗರಕ್ಕಿಂತಲೂ ಹೆಚ್ಚಿನ ವಿಷಯ. ಈ ಕುರಿತು ಮಾಹಿತಿ ನೀಡಲು ಸರಕಾರದಲ್ಲಿ ಒಬ್ಬರೂ ಅಧಿಕಾರಿಗಳಿಲ್ಲವೇ? ಇರುವ ಎಲ್ಲರೂ ಅಸಮರ್ಥರಾದ ಮೂರ್ಖರೇ?" ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, "ರಾಷ್ಟ್ರಪತಿ ಭವನದಲ್ಲಿ ಸುಭಾಷ್ ಚಂದ್ರ ಬೋಸ್ ಎಂದು ಸಿನಿಮಾ ನಟನ ಭಾವಚಿತ್ರ ತೂಗು ಹಾಕಲಾಗಿದೆ. ಹಾಗಿದ್ರೆ, ಚಂದ್ರಶೇಖರ ಆಜಾದ್ ಎಂದು ಅಮೀರ್ ಖಾನ್ ಫೋಟೊ ಬಳಸುತ್ತಾರೆಯೇ ಎಂದು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News