ಕೃಷಿ ಕಾನೂನು ಹಿಂಪಡೆಯಬೇಕೆಂದು ಕೇಂದ್ರಕ್ಕೆ ಮಾಯಾವತಿ ಮನವಿ

Update: 2021-01-25 08:35 GMT

ಹೊಸದಿಲ್ಲಿ: ಗಣರಾಜ್ಯೋತ್ಸವ ಮುನ್ನಾದಿನವಾದ ಸೋಮವಾರ ಬಹುಜನ ಸಮಾಜವಾದಿ ಪಕ್ಷ(ಬಿಎಸ್ ಪಿ)ಅಧ್ಯಕ್ಷೆ ಮಾಯಾವತಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಕೇಂದ್ರ ಸರಕಾರವನ್ನು ವಿನಂತಿಸಿದರು.

ಪ್ರತಿಭಟನಾನಿರತ ರೈತರ ಬೇಡಿಕೆಗಳನ್ನು ಈಡೇರಿಸಲು ಈ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಬಿಎಸ್ಪಿ ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತಿದೆ. ಗಣತಂತ್ರದ ದಿನ ಹೊಸ ಸಂಪ್ರದಾಯ ಆರಂಭವಾಗದು. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದು ಎಂಬ ವಿಶ್ವಾಸ ನನಗಿದೆ ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

ಇದೇ ವೇಳೆ, ಮುಂಬೈನ ಆಝಾದ್ ಮೈದಾನದಲ್ಲಿ ಸಂಯುಕ್ತ ಶೇತ್ಕಾರಿ ಕಾಮ್‍ಗಾರ್ ಮೋರ್ಚಾ ಆಯೋಜಿಸಿರುವ ಬೃಹತ್ ರೈತರ ರ್ಯಾಲಿಗೆ ಆಡಳಿತಾರೂಢ ಮಹಾವಿಕಾಸ ಅಘಾಡಿಬೆಂಬಲ ನೀಡಿದೆ. ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಾಲಾ ಸಾಹೇಬ್ ಥೋರತ್ ಹಾಗೂ ಶಿವಸೇನೆಯ ನಾಯಕ ರಾಹುಲ್ ಲೋಂಧೆ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News