"ವಸ್ತ್ರದ ಮೇಲಿನಿಂದ ಅಪ್ರಾಪ್ತೆಯ ದೇಹ ಸವರಿದರೆ ಪೋಕ್ಸೋ ಕಾಯ್ದೆಯಡಿ ಒಳಪಡುವುದಿಲ್ಲ"

Update: 2021-01-25 09:08 GMT

ಮುಂಬೈ,ಜ.25:  ಪೋಕ್ಸೋ ಕಾಯಿದೆಯನ್ವಯ ನೇರ ದೇಹ ಸಂಪರ್ಕವಿಲ್ಲದೆ ಬಟ್ಟೆಯ ಮೇಲ್ಗಡೆಯಿಂದಲೇ ಅಪ್ರಾಪ್ತೆಯೊಬ್ಬಳ ದೇಹವನ್ನು ಸವರುವುದು ಪೋಕ್ಸೋ ಕಾಯಿದೆಯನ್ವಯ ಲೈಂಗಿಕ ದೌರ್ಜನ್ಯ ಎಂದು ಪರಿಗಣಿತವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‍ನ ನಾಗ್ಪುರ್ ಪೀಠ ಹೇಳಿದೆ. ಲೈಂಗಿಕ ಉದ್ದೇಶದಿಂದ ದೇಹದಿಂದ ದೇಹಕ್ಕೆ ನೇರ ಸಂಪರ್ಕವಿದ್ದಾಗ ಮಾತ್ರ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಬಹುದಾಗಿದೆ ಎಂದು ಬಾಂಬೆ ಹೈಕೋರ್ಟ್‍ನ ನಾಗ್ಪುರ ಪೀಠದ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲ ಲೈಂಗಿಕ ಹಲ್ಲೆ ಪ್ರಕರಣದ ತೀರ್ಪು ನೀಡುವ ವೇಳೆ ಹೇಳಿದ್ದಾರೆ.

ಹನ್ನೆರಡು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ತಪ್ಪಿಗೆ 39 ವರ್ಷದ ವಯಕ್ತಿಗೆ  ಈ ಹಿಂದೆ ಸೆಶನ್ಸ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಘೋಷಿಸಿದ್ದರೆ, ಬಾಂಬೆ ಹೈಕೋರ್ಟ್‍ನ ನಾಗ್ಪುರ್ ಪೀಠ ಆರೋಪಿಯನ್ನು ಪೋಕ್ಸೋ ಕಾಯಿದೆಯನ್ವಯ ದೋಷಮುಕ್ತಗೊಳಿಸಿದರೂ ಐಪಿಸಿ ಸೆಕ್ಷನ್ 354 ಅನ್ವಯ ಆತನನ್ನು ತಪ್ಪಿತಸ್ಥನೆಂದು ಘೋಷಿಸಿದೆ.

ಆರೋಪಿ ಸತೀಶ್ ಬಾಲಕಿಗೆ ತಿಂಡಿ ಕೊಡುವ ನೆಪದಲ್ಲಿ ನಾಗ್ಪುರ್ ನ ತನ್ನ ಮನೆಗೆ ಕರೆಸಿಕೊಂಡು ನಂತರ ಆಕೆಯನ್ನು ವಿವಸ್ತ್ರಗೊಳಿಸದೆ ಆಕೆಯ ಎದೆ ಮೇಲೆ ಕೈಯ್ಯಾಡಿಸಿದ್ದರಿಂದ ಅದು ಪೋಕ್ಸೋ ಕಾಯಿದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲ್ಪಡದೇ ಇದ್ದರೂ ಐಪಿಸಿ ಸೆಕ್ಷನ್ 354 ಅನ್ವಯ ಅಪರಾಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News