ಕೊರೋನ ಸಂಬಂಧಿ ಪ್ರಯಾಣ ನಿಷೇಧವನ್ನು ಮರು ಹೇರಿದ ಅಮೇರಿಕ

Update: 2021-01-25 17:26 GMT

ವಾಶಿಂಗ್ಟನ್, ಜ. 25: ಬ್ರಿಟನ್, ಬ್ರೆಝಿಲ್, ಐರ್‌ಲ್ಯಾಂಡ್ ಮತ್ತು ಯುರೋಪ್‌ನ ಹೆಚ್ಚು ಭಾಗಗಳಲ್ಲಿ ಇರುವ ಹೆಚ್ಚಿನ ಅಮೆರಿಕೇತರ ಪ್ರಜೆಗಳ ಮೇಲೆ ಅವೆುರಿಕದ ನೂತನ ಜೋ ಬೈಡನ್ ಸರಕಾರವು ಕೊರೋನ ಸಂಬಂಧಿ ಪ್ರಯಾಣ ನಿಷೇಧವನ್ನು ಮರು ಹೇರುವುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ರವಿವಾರ ಹೇಳಿದ್ದಾರೆ.

ಅದೇ ವೇಳೆ, ಪ್ರಯಾಣ ನಿಷೇಧವನ್ನು ಇತ್ತೀಚೆಗೆ ದಕ್ಷಿಣ ಆಫ್ರಿಕಕ್ಕೆ ಹೋಗಿರುವ ಪ್ರವಾಸಿಗರಿಗೂ ವಿಸ್ತರಿಸಲಾಗುವುದು ಎಂದು ಅವರು ನುಡಿದರು. ದಕ್ಷಿಣ ಆಫ್ರಿಕದಲ್ಲಿ ತಿಂಗಳ ಹಿಂದೆ ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್ ಮಾದರಿಯ ಪ್ರಕರಣಗಳು ಅಮೆರಿಕದಲ್ಲೂ ಹೆಚ್ಚೆಚ್ಚು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಸರಕಾರ ಈ ಕ್ರಮ ತೆಗೆದುಕೊಂಡಿದೆ.

ಬೈಡನ್ ಕಳೆದ ವಾರ ಮುಖಗವಸು ಧರಿಸುವ ನಿಯಮಗಳನ್ನು ಬಿಗಿಗೊಳಿಸಿದ್ದಾರೆ ಹಾಗೂ ಅಮೆರಿಕಕ್ಕೆ ಬರುವವರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News