“ಸರಕಾರವು ರೈತರ ಮುಂದೆ ಅತ್ಯುತ್ತಮ ಕೊಡುಗೆಯಿರಿಸಿದೆ, ಸಂಘಟನೆಗಳಿಂದ ಅದರ ಪುನರ್‌ಪರಿಶೀಲನೆ ಆಶಿಸಿದ್ದೇವೆ”

Update: 2021-01-25 18:50 GMT

ಹೊಸದಿಲ್ಲಿ,ಜ.25: ನೂತನ ಕೃಷಿ ಕಾನೂನುಗಳನ್ನು ಒಂದು-ಒಂದೂವರೆ ವರ್ಷ ಅಮಾನತಿನಲ್ಲಿರಿಸುವ ಸರಕಾರದ ಪ್ರಸ್ತಾವವು ಅತ್ತುತ್ತಮ ಕೊಡುಗೆಯಾಗಿದೆ ಎಂದು ಸೋಮವಾರ ಇಲ್ಲಿ ಬಣ್ಣಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು,ಪ್ರತಿಭಟನಾನಿರತ ರೈತ ಸಂಘಟನೆಗಳು ಶೀಘ್ರವೇ ಈ ಪ್ರಸ್ತಾವವನ್ನು ಪುನರ್‌ಪರಿಶೀಲಿಸುತ್ತವೆ ಮತ್ತು ತಮ್ಮ ನಿರ್ಧಾರವನ್ನು ತಿಳಿಸುತ್ತವೆ ಎಂಬ ಆಶಯ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ಪ್ರತಿಭಟನಾನಿರತ ರೈತರ 41 ಸಂಘಟನೆಗಳ ನಡುವೆ ನಡೆದಿರುವ ಮಾತುಕತೆಗಳು 11 ಸುತ್ತುಗಳ ಬಳಿಕವೂ ನಿರೀಕ್ಷಿತ ಫಲಿತಾಂಶಗಳನ್ನು ನೀಡಿಲ್ಲ. 10ನೇ ಸುತ್ತಿನ ಮಾತುಕತೆಗಳ ಸಂದರ್ಭ ತನ್ನ ನಿಲುವನ್ನು ಕೊಂಚ ಸಡಿಲಿಸಿದ್ದ ಸರಕಾರವು ನೂತನ ಕೃಷಿ ಕಾನೂನುಗಳನ್ನು ಒಂದು-ಒಂದೂವರೆ ವರ್ಷ ಕಾಲ ಅಮಾನತುಗೊಳಿಸುವ ಪ್ರಸ್ತಾವವನ್ನು ಮುಂದಿರಿಸಿತ್ತು. ಆದರೆ ರೈತ ಸಂಘಟನೆಗಳು ಅದನ್ನು ತಿರಸ್ಕರಿಸಿದ್ದವು.

 ಪ್ರಸ್ತಾವವನ್ನು ಪುನರ್‌ಪರಿಶೀಲಿಸುವಂತೆ ಮತ್ತು ತಮ್ಮ ಅಂತಿಮ ನಿರ್ಧಾರವನ್ನು ತಿಳಿಸುವಂತೆ 11ನೇ ಸುತ್ತಿನ ಮಾತುಕತೆಗಳ ವೇಳೆ ಸರಕಾರವು ರೈತ ಸಂಘಟನೆಗಳಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News