ವಿದೇಶ ಕಾರ್ಯದರ್ಶಿಯಾಗಿ ಬ್ಲಿಂಕನ್ ನೇಮಕಾತಿಗೆ ಸೆನೆಟ್ ಅನುಮೋದನೆ

Update: 2021-01-27 16:49 GMT

ವಾಶಿಂಗ್ಟನ್, ಜ. 27: ಅಮೆರಿಕದ ವಿದೇಶ ಕಾರ್ಯದರ್ಶಿಯಾಗಿ ಆ್ಯಂಟನಿ ಬ್ಲಿಂಕನ್ ನೇಮಕಾತಿಗೆ ಸೆನೆಟ್ ಮಂಗಳವಾರ ಅನುಮೋದನೆ ನೀಡಿದೆ. ಪ್ರತಿಪಕ್ಷ ರಿಪಬ್ಲಿಕನ್ ಪಕ್ಷದ ಹಲವು ಸದಸ್ಯರು ಈ ನೇಮಕಾತಿಗೆ ಬೆಂಬಲ ವ್ಯಕ್ತಪಡಿಸಿದರು.

ಬ್ಲಿಂಕನ್ ನೇಮಕಾತಿಗೆ ಬೆಂಬಲ ಸೂಚಿಸಿದ ರಿಪಬ್ಲಿಕನ್ ಸೆನೆಟರ್‌ಗಳಲ್ಲಿ ಇಬ್ಬರು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರೂ ಸೇರಿದ್ದಾರೆ. ಅವರೆಂದರೆ ಕ್ಯೂಬಾ ಮತ್ತು ವೆನೆಝುವೆಲ ದೇಶಗಳ ಎಡಪಂಥೀಯ ಸರಕಾರಗಳ ತೀವ್ರ ಟೀಕಾಕಾರರಾಗಿರುವ ಮಾರ್ಕೊ ರೂಬಿಯೊ ಮತ್ತು ಸಿರಿಯ ಮತ್ತು ಇರಾನ್‌ಗಳ ಬಗ್ಗೆ ಕಠಿಣ ಧೋರಣೆ ಅನುಸರಿಸುತ್ತಾ ಬಂದಿರುವ ಲಿಂಡ್ಸೆ ಗ್ರಹಾಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News