×
Ad

ದಿಲ್ಲಿ: ಇಸ್ರೇಲ್‌ ರಾಯಭಾರಿ ಕಚೇರಿಯ ಬಳಿ ಸ್ಫೋಟ

Update: 2021-01-29 19:27 IST
photo: indian express

ಹೊಸದಿಲ್ಲಿ,ಜ.29: ದಿಲ್ಲಿಯ ಕೇಂದ್ರ ಭಾಗದಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಬಳಿ ಸಣ್ಣ ಮಟ್ಟದ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ndtv.com ವರದಿ ಮಾಡಿದೆ. ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಸಮೀಪದಲ್ಲಿದ್ದ ವಾಹನದ ಗಾಜುಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

ವಿಜಯಾ ಚೌಕ್‌ ಗಿಂತ 2ಕಿ.ಮೀ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ. ವಿಜಯಾ ಚೌಕ್‌ ನಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ಸರಕಾರಿ ಅಧಿಕಾರಿಗಳು ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತಾದಂತೆ ಎಲ್ಲಾ ವಿಮಾನ ನಿಲ್ದಾಣ, ಸರಕಾರಿ ಕಚೇರಿಗಳು ಹಾಗೂ ಇನ್ನಿತರ ಕಡೆಗಳಲ್ಲಿ ಭದ್ರತಾ ಕ್ರಮಗಳನ್ನು ಏರ್ಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಫೋಟಕವನ್ನು ಪ್ಲಾಸ್ಟಿಕ್‌ ಬ್ಯಾಗ್‌ ನಲ್ಲಿ ಸುತ್ತಿ ಜಿಂದಾಲ್‌ ರೆಸಿಡೆನ್ಸ್‌ ಹೊರಗಡೆ ಇರಿಸಲಾಗಿತ್ತು. ಈ ಸ್ಥಳವು ಇಸ್ರೇಲ್‌ ರಾಯಭಾರಿ ಕಚೇರಿಯಿಂದ ಸ್ವಲ್ಪವೇ ದೂರದಲ್ಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News