ಭಾರತದಿಂದ ಆ್ಯಸ್ಟ್ರಝೆನೆಕ ಲಸಿಕೆ ಆಮದು: ಮೆಕ್ಸಿಕೊ

Update: 2021-01-30 15:55 GMT

ಮೆಕ್ಸಿಕೊ ಸಿಟಿ, ಜ. 30: ಆ್ಯಸ್ಟ್ರಝೆನೆಕ ಕಂಪೆನಿಯ ಕೋವಿಡ್-19 ಲಸಿಕೆಯ 8,70,000 ಡೋಸ್‌ಗಳನ್ನು ಫೆಬ್ರವರಿಯಲ್ಲಿ ಭಾರತದಿಂದ ಆಮದು ಮಾಡಿಕೊಳ್ಳಲು ಮೆಕ್ಸಿಕೊ ಉದ್ದೇಶಿಸಿದೆ ಹಾಗೂ ಅದನ್ನು ದೇಶದಲ್ಲೇ ಉತ್ಪಾದಿಸುವ ಬಗ್ಗೆಯೂ ಚಿಂತಿಸುತ್ತಿದೆ ಎಂದು ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರಿಸ್ ಮ್ಯಾನುಯೆಲ್ ಲೊಪೆಝ್ ಓಬ್ರಡರ್ ಶುಕ್ರವಾರ ಹೇಳಿದ್ದಾರೆ.

 ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ವಿತರಣೆಗಾಗಿ ಲಸಿಕೆಯನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿ ಮೆಕ್ಸಿಕೊ ಮತ್ತು ಅರ್ಜೆಂಟೀನ ದೇಶಗಳು ಆ್ಯಸ್ಟ್ರಝೆನೆಕದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿವೆ.

‘‘ಈ ಲಸಿಕೆಯನ್ನು ಮೆಕ್ಸಿಕೊದಲ್ಲಿ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿರುವ ಹೊರತಾಗಿಯೂ, ನಾವು ಭಾರತದಿಂದ ಲಸಿಕೆಯನ್ನು ತರಲಿದ್ದೇವೆ’’ ಎಂದು ವೀಡಿಯೊ ಸಂದೇಶವೊಂದರಲ್ಲಿ ಲೊಪೆಝ್ ಓಬ್ರಡರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News