‘ಲಸಿಕೆ ರಾಷ್ಟ್ರೀಯತೆ’ಯಿಂದ ಕೊರೋನ ಕೊನೆ ವಿಳಂಬ

Update: 2021-01-30 16:48 GMT

ಡಾವೋಸ್ (ಸ್ವಿಟ್ಸರ್‌ಲ್ಯಾಂಡ್), ಜ. 30: ‘ಲಸಿಕೆ ರಾಷ್ಟ್ರೀಯತೆ’ಯು ಕೋವಿಡ್-19 ಸಾಂಕ್ರಾಮಿಕದ ಕೊನೆಯನ್ನು ವಿಳಂಬಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಶುಕ್ರವಾರ ಹೇಳಿದ್ದಾರೆ. ಕೆಲವು ದೇಶಗಳು ತಮ್ಮ ನಾಗರಿಕರಿಗೆ ಮಾತ್ರ ಲಸಿಕೆಗಳನ್ನು ಬಿಡುಗಡೆ ಮಾಡುತ್ತಿವೆ ಹಾಗೂ ಜಗತ್ತಿನ ಅತ್ಯಂತ ಹಿಂದುಳಿದ ದೇಶಗಳು ಕಾಯುತ್ತಾ ಕುಳಿತುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಿಟ್ಜರ್‌ಲ್ಯಾಂಡ್‌ನ ಡಾವೋಸ್ ನಗರದಲ್ಲಿ ನಡೆಯುತ್ತಿರುವ ಒಂದು ವಾರದ ಅವಧಿಯ ವಿಶ್ವ ಆರ್ಥಿಕ ವೇದಿಕೆ ಶೃಂಗ ಸಮ್ಮೇಳನದ ಕೊನೆಯ ದಿನದಂದು ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿಯು, ಕೋವಿಡ್-19ಕ್ಕೆ ಸಂಬಂಧಿಸಿ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಬಳಿಕ ಶನಿವಾರಕ್ಕೆ ಒಂದು ವರ್ಷ ತುಂಬುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News