×
Ad

ಅಣ್ಣಾ ಹಝಾರೆ ನಡೆ ನಿರೀಕ್ಷಿತ: ಶಿವಸೇನೆ ವ್ಯಂಗ್ಯ

Update: 2021-01-30 22:31 IST

ಮುಂಬೈ: ರೈತರ ವಿಷಯಗಳನ್ನು  ಮುಂದಿಟ್ಟುಕೊಂಡು ಅಣ್ಣಾ ಹಝಾರೆ ಅವರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿ, ನಂತರ ಅದರಿಂದ ಹಿಂದೆ ಸರಿಯುವುದು ಮಾಮೂಲಿ. ಈ ಬಾರಿಯೂ ಅದು ನಿರೀಕ್ಷೆಯಂತೆಯೇ ಆಗಿದೆ ಎಂದು ಶಿವಸೇನೆ ಶನಿವಾರ ವ್ಯಂಗ್ಯವಾಡಿದೆ.

ಹಝಾರೆ ಅವರ ಈ ನಡೆ ತಮಾಷೆ ಎನಿಸುತ್ತವೆ. ಆದರೆ, ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಹಝಾರೆ ಅವರ ನಿಲುವು ಏನು ಎಂಬುದು ಇನ್ನೂ ಅಸ್ಪಷ್ಟ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ  

ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಶುಕ್ರವಾರ ಘೋಷಿಸಿದ್ದರು.

ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್ ಚೌಧರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಹಝಾರೆ ತಮ್ಮ ನಿರ್ಧಾರ ಬದಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News