ತೇಜಸ್ ಮಾರ್ಕ್- II ಯುದ್ಧವಿಮಾನದ ವಿನ್ಯಾಸಕ್ಕೆ ಚಾಲನೆ: ಮಾಧವನ್
ಹೊಸದಿಲ್ಲಿ, ಜ.31: ದೇಶೀಯವಾಗಿ ನಿರ್ಮಿಸಲಾಗುವ ತೇಜಸ್ ಯುದ್ಧವಿಮಾನದ ಅತ್ಯಾಧುನಿಕ ಆವೃತ್ತಿಯ ವಿನ್ಯಾಸಕ್ಕೆ ಮುಂದಿನ ವರ್ಷ ಚಾಲನೆ ನೀಡಲಾಗುವುದು. ಅಧಿಕ ಶಕ್ತಿಶಾಲಿ ಇಂಜಿನ್, ಹೆಚ್ಚಿನ ಹೊರೆ ಸಾಗಿಸುವ ಸಾಮರ್ಥ್ಯ, ಮುಂದಿನ ಪೀಳಿಗೆಯ ವಿದ್ಯುನ್ಮಾನ ಯುದ್ಧವ್ಯವಸ್ಥೆ, ಉತ್ಕೃಷ್ಟ ವೈಮಾನಿಕ ರಚನೆಯನ್ನು ಹೊಂದಿರುವ ತೇಜಸ್ ಮಾರ್ಕ್ -II
ಸುಧಾರಿತ ಆವೃತ್ತಿಯ ತೇಜಸ್ ಯುದ್ಧವಿಮಾನದ ಗಾತ್ರ ಹೆಚ್ಚಿರಲಿದ್ದು ಹೆಚ್ಚಿನ ವ್ಯಾಪ್ತಿ ಕ್ಷೇತ್ರ, ಉತ್ತಮ ನಿರ್ವಹಣಾ ಸಾಮರ್ಥ್ಯ, ಹೆಚ್ಚಿನ ಹೊರೆ ಸಾಗಿಸುವ ಸಾಮರ್ಥ್ಯಗಳನ್ನು ಹೊಂದಿರಲಿದೆ. ಇದು ಎಚ್‌ಎಎಲ್ ಪೂರೈಸಲಿರುವ ತೇಜಸ್ ಮಾರ್ಕ್-ಎ ಯುದ್ಧವಿಮಾನಗಳಿಂತ ಶ್ರೇಷ್ಟವಾಗಿರಲಿದೆ. ಸರಕಾರಿ ಅಧೀನದ ಸಂಸ್ಥೆಯಾಗಿರುವ ಎಚ್‌ಎಎಲ್ ನಿರ್ಮಿಸುವ ಏಕ ಇಂಜಿನ್ ಹೊಂದಿರುವ, ಬಹುವಿಧದ ಕಾರ್ಯನಿರ್ವಹಿಸುವ ಸೂಪರ್‌ಸಾನಿಕ್ ಯುದ್ಧವಿಮಾನವಾಗಿರುವ ತೇಜಸ್‌ನ ಪ್ರಯೋಗ ಮಾದರಿ 2026ರೊಳಗೆ ಸಿದ್ಧವಾಗಲಿದೆ ಮತ್ತು ವಿಮಾನದ ಉತ್ಪಾದನಾ ಕಾರ್ಯಕ್ಕೆ 2030ರಲ್ಲಿ ಚಾಲನೆ ದೊರಕಲಿದೆ. ಯೋಜನೆಯ ವೇಳಾಪಟ್ಟಿಯ ಅಂತಿಮಗೊಳಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಕಾರ್ಯಪ್ರವೃತ್ತವಾಗಿದೆ ಎಂದವರು ಹೇಳಿದ್ದಾರೆ.
ತೇಜಸ್ ಮಾರ್ಕ್- II
48,000 ಕೋಟಿ ರೂ. ವೆಚ್ಚದ ತೇಜಸ್ ಯೋಜನೆಯು ದೇಶದ ವಿಮಾನನಿರ್ಮಾಣ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲಿದೆ. ಚೀನಾದ ಜೆಎಫ್-17 ಯುದ್ಧವಿಮಾನಕ್ಕೆ ಹೋಲಿಸಿದರೆ ತೇಜಸ್ ಮಾರ್ಕ್ 1ಎ ಯುದ್ಧವಿಮಾನ ಉತ್ತಮ ನಿರ್ವಹಣೆ ಮಟ್ಟವನ್ನು ಹೊಂದಿರುತ್ತದೆ ಎಂದವರು ಹೇಳಿದ್ದಾರೆ.