ಎರಡನೇ ಬಾರಿ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಟ್ಟ ತಮಿಳುನಾಡು
Update: 2021-01-31 23:02 IST
ಚೆನ್ನೈ: ಎಡಗೈ ಸ್ಪಿನ್ನರ್ ಎಂ.ಸಿದ್ದಾರ್ಥ್ (4-0-20-4)ಸೊಗಸಾದ ಬೌಲಿಂಗ್ ನೆರವಿನಿಂದ ತಮಿಳುನಾಡು ತಂಡ ಬರೋಡವನ್ನು 7 ವಿಕೆಟ್ ಗಳಿಂದ ಮಣಿಸಿತು. ಈ ಮೂಲಕ ಎರಡನೇ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಟ್ಟಿತು.
ಅಹ್ಮದಾಬಾದ್ ನ ಮೊಟೆರಾ ಸ್ಟೇಡಿಯಂನಲ್ಲಿ ರವಿವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ಮೂಲಕ ಸಿದ್ದಾರ್ಥ್ ಅವರು ಬರೋಡವನ್ನು 9 ವಿಕೆಟ್ ನಷ್ಟಕ್ಕೆ 120 ರನ್ ಗೆ ನಿಯಂತ್ರಿಸಿದರು.ಗೆಲ್ಲಲು ಸುಲಭ ಸವಾಲು ಪಡೆದ ತಮಿಳುನಾಡು 18 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಓಪನರ್ ಸಿ.ಹರಿ ನಿಶಾಂತ್(35, 3 ಬೌಂ. 1 ಸಿ.)ಹಾಗೂ ಬಿ.ಅಪರಾಜಿತ್ (ಔಟಾಗದೆ 29, 1 ಬೌಂಡರಿ)ಬ್ಯಾಟಿಂಗ್ ನಲ್ಲಿ ಕೊಡುಗೆ ನೀಡಿದರು. ಆದರೆ ಇಂದಿನ ಪಂದ್ಯದಲ್ಲಿ ಸಿದ್ದಾರ್ಥ್ ಗೆಲುವಿನ ರೂವಾರಿಯಾಗಿ ಮೂಡಿಬಂದರು.
ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಸಮಯದಲ್ಲೇ ಸಿದ್ದಾರ್ಥ್ ಗಮನಾರ್ಹ ಪ್ರದರ್ಶನ ನೀಡಿದ್ದರು.