ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಸಹೋದರರು

Update: 2021-02-02 12:26 GMT

ಬೆಂಗಳೂರು, ಫೆ.2: ಚಿನ್ನದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದರರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರ್ತಪೇಟೆಯ ಎಂ.ಪಿ.ಜುವ್ಯೆಲರ್ಸ್ ಕ್ರಾಪ್ಟ್ ಚಿನ್ನದಂಗಡಿ ಮಾಲಕ ಸಂಕಿತ್‍ಜೈನ್ ನೀಡಿದ ದೂರಿನ ಮೇರೆಗೆ ಸಹೋದರಾದ ಧನ್‍ವೀರ್ ಮತ್ತು ಅಣ್ಣ ಮಹಾವೀರ್ ವಿರುದ್ದ ಪ್ರಕರಣ ದಾಖಲಾಗಿದೆ.

ಹಲವು ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರರು ಮಾಲಕನ ವಿಶ್ವಾಸ ಗಳಿಸಿದ್ದರು. ಇದೇ ನಂಬಿಕೆ ಮೇರೆಗೆ ಸಂಕಿತ್ ಜೈನ್, ಬಿಕ್ಸು ಎಂಬುವವರ ಚಿನ್ನದಂಗಡಿಗೆ 1.87 ಕೆಜಿ ಚಿನ್ನಾಭರಣದ ಸ್ಯಾಂಪಲ್ ತೋರಿಸಿ, ಬಳಿಕ ವಾಪಸ್ ತರುವಂತೆ ಇಬ್ಬರು ಸಹೋದರರಿಗೆ ಹೇಳಿದ್ದರು. ಅದರಂತೆ ಧನ್‍ವೀರ್ ಮತ್ತು ಅಣ್ಣ ಮಹಾವೀರ್, ಬಿಕ್ಸು ಎಂಬವರ ಚಿನ್ನದಂಗಡಿಗೆ ಚಿನ್ನ ತಂದಿದ್ದಾರೆ. ಆದರೆ ಮಾಲಕರಿಗೆ ವಾಪಸ್ ತಂದುಕೊಡದೆ ಮೊಬೈಲ್ ಸಂಪರ್ಕ ಕಡಿತಗೊಳಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News