ಗಾಂಧಿ ಪ್ರತಿಮೆ ಧ್ವಂಸ: ಎಫ್‌ಬಿಐ ತನಿಖೆಗೆ ಭಾರತ ಮೂಲದ ಸಂಸದರ ಒತ್ತಾಯ

Update: 2021-02-03 15:23 GMT

ವಾಶಿಂಗ್ಟನ್, ಫೆ. 3: ಕ್ಯಾಲಿಫೋರ್ನಿಯದಲ್ಲಿ ಇತ್ತೀಚೆಗೆ ಮಹಾತ್ಮಾ ಗಾಂಧಿಯ ಪ್ರತಿಮೆ ಧ್ವಂಸಗೊಂಡ ಘಟನೆಯ ಬಗ್ಗೆ ಎಫ್‌ಬಿಐಯಿಂದ ತನಿಖೆ ನಡೆಸುವಂತೆ ಅಮೆರಿಕದ ಭಾರತ ಮೂಲದ ಸಂಸದ ರಾಜಾ ಕೃಷ್ಣಮೂರ್ತಿ ಮಂಗಳವಾರ ಸರಕಾರವನ್ನು ಒತ್ತಾಯಿಸಿದ್ದಾರೆ.

 ‘‘ಈ ದುಷ್ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಭಾರತೀಯ ಅಮೆರಿಕನ್ನರನ್ನು ಬೆದರಿಸುವ ಉದ್ದೇಶದ ಸಂಭಾವ್ಯ ದ್ವೇಷಾಪರಾಧವಾಗಿದೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿದ್ದ ಮಹಾತ್ಮಾ ಗಾಂಧಿಯ ಆರು ಅಡಿ ಎತ್ತರದ, 294 ಕೆಜಿ ತೂಕದ ಕಂಚಿನ ವಿಗ್ರಹವನ್ನು ಇತ್ತೀಚೆಗೆ ಬುಡದಿಂದಲೇ ಕತ್ತರಿಸಲಾಗಿತ್ತು.

ಭಾರತ ಮೂಲದ ಸಂಸದರಾದ ಆಮಿ ಬೇರಾ ಕೂಡ ಪ್ರತಿಮೆ ಧ್ವಂಸವನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News