ಅಮೆರಿಕವು ಸೌದಿಗೆ ಮಿಲಿಟರಿ ಬೆಂಬಲ ಹಿಂತೆಗೆಯುವುದರಿಂದ ಯೆಮನ್ ಯುದ್ಧ ಕೊನೆಗೊಳ್ಳಲಾರದು: ಇರಾನ್

Update: 2021-02-07 16:30 GMT

 ಟೆಹರಾನ್,ಫೆ.7: ಸೌದಿ ಅರೇಬಿಯ ನೇತೃತ್ವದ ಮಿಲಿಟರಿ ಮೈತ್ರಿಕೂಟಕ್ಕೆ ಸೇನಾ ನೆರವನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರವು, ಗತಕಾಲದ ತಪ್ಪುಗಳನ್ನು ಸರಿಪಡಿಸಲು ನೆರವಾಗಲಿದೆಯೆಂದು ಇರಾನ್ ಹೇಳಿದೆ. ಆದರೆ ಇದರಿಂದ ಆರು ವರ್ಷಗಳಿಂದ ನಡೆಯುತ್ತಿರುವ ಯೆಮನ್ ಯುದ್ಧಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಲಾರದೆಂದು ಅದು ಅಭಿಪ್ರಾಯಿಸಿದೆ.

 ಶಸ್ತ್ರಾಸ್ತ್ರಗಳ ಮಾರಾಟವನ್ನು ನಿಲ್ಲಿಸುವುದು ಸೇರಿದಂತೆ ಸೌರಿ ಆರೇಬಿಯಕ್ಕೆ ನೀಡುತ್ತಿರುವ ಆಕ್ರಮಣಕಾರಿ ಬೆಂಬಲವನ್ನು ಕೊನೆಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಘೋಷಿಸಿದ್ದರು. ಜೋ ಬೈಡನ್ ಅವರ ಈ ನಿರ್ಧಾರವು ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಮನ್ ಯುದ್ಧದ ಕುರಿತ ನಿಲುವಿಗಿಂತ ಸಂಪೂರ್ಣ ವ್ಯತಿರಿಕ್ತವಾಗಿದೆ.

  ‘‘ಸೌದಿ ಆರೇಬಿಯದ ಮಿಲಿಟರಿ ಮೈತ್ರಿಕೂಟಕ್ಕೆ ಬೆಂಬಲವನ್ನು ಕೊನೆಗೊಳಿಸುವುದು ಹಾಗೂ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡದಿರುವುದು , ಗತ ಪ್ರಮಾದಗಳನ್ನು ಸರಿಪಡಿಸುವತ್ತ ಇಟ್ಟಿರುವ ಒಂದು ಹೆಜ್ಜೆಯಾಗಬಹುದು’’ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಸಯೀದ್ ಖತೀಬ್‌ಝಾದೆಹ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News