ಶೀತಲ ಸಮರ ಕೊನೆಗೊಳಿಸಿದ ಅಮೆರಿಕ ವಿದೇಶ ಕಾರ್ಯದರ್ಶಿ ನಿಧನ

Update: 2021-02-09 06:48 GMT

ವಾಶಿಂಗ್ಟನ್, ಫೆ. 8: ಶೀತಲ ಸಮರವನ್ನು ಕೊನೆಗೊಳಿಸಲು ನೆರವಾದ ರಾಜತಾಂತ್ರಿಕ ನಡೆಯೊಂದನ್ನು ಪ್ರದರ್ಶಿಸಿದ ಅಮೆರಿಕದ ಮಾಜಿ ವಿದೇಶ ಕಾರ್ಯದರ್ಶಿ ಜಾರ್ಜ್ ಶಲ್ಝ್ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಅವರು ಅಧ್ಯಕ್ಷ ರೊನಾಲ್ಡ್ ರೇಗನ್ ಅವಧಿಯಲ್ಲಿ, 1982ರಿಂದ 1989ರವರೆಗೆ ಅಮೆರಿಕದ ವಿದೇಶ ಕಾರ್ಯದರ್ಶಿಯಾಗಿದ್ದರು.

ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ನಡುವಿನ ಶೀತಲ ಸಮರದ ಉತ್ತುಂಗ ಅವಧಿಯಲ್ಲಿ, ಅವರು ರೇಗನ್ ಮತ್ತು ಸೋವಿಯತ್ ಒಕ್ಕೂಟದ ನಾಯಕರ ನಡುವೆ ಮಾತುಕತೆಗಳನ್ನು ಏರ್ಪಡಿಸಿದರು.

1987ರಲ್ಲಿ ರೇಗನ್ ಮತ್ತು ಸೋವಿಯತ್ ಒಕ್ಕೂಟದ ನಾಯಕ ಮಿಖೈಲ್ ಗೋರ್ಬಚೆವ್ ಮಹತ್ವದ ಮಧ್ಯಮ ವ್ಯಾಪ್ತಿಯ ಪರಮಾಣು ಅಸ್ತ್ರಗಳ ಒಪ್ಪಂದಕ್ಕೆ ಸಹಿ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News