ರೈತರ ಪ್ರತಿಭಟನೆ ಕುರಿತ ಹಾಡುಗಳನ್ನು ತೆಗೆದು ಹಾಕಿದ ಯೂಟ್ಯೂಬ್

Update: 2021-02-09 10:35 GMT

ಹೊಸದಿಲ್ಲಿ: ರೈತರ ಪ್ರತಿಭಟನೆ ಕುರಿತಾದ ಎರಡು ಪಂಜಾಬಿ ಹಾಡುಗಳನ್ನು ಯೂಟ್ಯೂಬ್ ಇಂಡಿಯಾ ವೆಬ್ ಸೈಟ್‍ನಿಂದ ತೆಗೆದು ಹಾಕಲಾಗಿದೆ. ಈ ಕ್ರಮ ಪ್ರತಿರೋಧದ ಹಾಡುಗಳನ್ನು ದಮನಿಸುವ ಯತ್ನ ಎಂದು ರೈತ ಹೋರಾಟಗಾರರು ಹೇಳುತ್ತಿದ್ಧಾರೆ.

"ಫಸ್ಲಾನ್ ದೆ ಫೈಸ್ಲೇ ಕಿಸಾನ್ ಕರೂಗ" (ಎಲ್ಲಾ ಕೃಷಿ ಸಂಬಂಧಿತ ನಿರ್ಧಾರಗಳನ್ನು ರೈತರೇ ತೆಗೆದುಕೊಳ್ಳುತ್ತಾರೆ) ಹಾಗೂ ʼಅಸಿ ವದೇಂಗೆʼ( ವಿ ವಿಲ್ ಬ್ರೇಕ್ ಯು) ಎಂಬ ಹಾಡುಗಳನ್ನು ತೆಗೆದು ಹಾಕಲಾಗಿದೆ.

"ಮೂರುದಿನಗಳ ಹಿಂದೆ ಈ ಹಾಡುಗಳು ಯೂಟ್ಯೂಬ್ ಇಂಡಿಯಾದಿಂದ ತೆಗೆದು ಹಾಕಲಾಗಿರುವುದದ್ನು ಗಮನಿಸಿ ಕ್ಯಾಲಿಫೋರ್ನಿಯಾದ ಯುಟ್ಯೂಬ್ ಮುಖ್ಯ ಕಾರ್ಯಾಲಯದ ಕೆಲವರನ್ನು ಸಂಪರ್ಕಿಸಿದಾಗ ಭಾರತ ಸರಕಾರದ ಕೆಲವು ನಿಯಮಗಳು ಹಾಗೂ ನೀತಿಗಳನ್ನು ಈ ಹಾಡುಗಳು ಉಲ್ಲಂಘಿಸುತ್ತವೆಯೆಂದು ಕಾನೂನಾತ್ಮಕ ದೂರಿನ ಮೂಲಕ ಭಾರತ ಸರಕಾರದ ಬಾಹ್ಯ ಹಸ್ತಕ್ಷೇಪವಿತ್ತು ಎಂದು ತಿಳಿಸಲಾಗಿದೆ" ಎಂದು ಹಾಡಿನ ನಿರ್ಮಾಪಕ ಹರ್ಜಿಂದರ್ ಲಡ್ಡಿ ಹೇಳಿದ್ದಾರೆ. 

ಸೆಪ್ಟೆಂಬರಿನಿಂದ ಯೂಟ್ಯೂಬ್ ನಲ್ಲಿದ್ದ ಹಾಡುಗಳನ್ನು ತೆಗೆದು ಹಾಕಲಾಗಿದೆ ಅದು ಯಾವುದೇ ಪರಿಣಾಮ ಬೀರದು ಆ ಹಾಡುಗಳನ್ನು ಈಗಲೂ ಜನರು ಗುನುಗುನಿಸುತ್ತಾರೆ ಎಂದು ಹಾಡಿನ ತಯಾರಕರು ಹೇಳುತ್ತಾರೆ. ರೈತ ಹೋರಾಟವನ್ನು ಹತ್ತಿಕ್ಕುವ ತನ್ನ ಯತ್ನದ ಭಾಗವಾಗಿ ಸರಕಾರ ಇಂತಹ ಕ್ರಮ ಕೈಗೊಳ್ಳುತ್ತಿದೆ ಎಂದೂ ಅವರು ಆರೋಪಿಸುತ್ತಾರೆ.

ಹಾಡುಗಳನ್ನು ತೆಗೆದು ಹಾಕಲಾಗಿರುವ ಕುರಿತು ತಮಗೆ ಯಾವುದೇ ಅಧಿಕೃತ ನೋಟಿಸ್ ಯಾ ನೋಟಿಫಿಕೇಶನ್ ಬಂದಿಲ್ಲ ಎಂದು ಹಾಡುಗಳ ನಿರ್ಮಾಪಕರು ಹಾಗೂ ಗಾಯಕರು ಹೇಳಿದ್ದಾರೆ.

ಈ ನಡುವೆ ಐಲಾನ್ ಎಂಬ ಹೆಸರಿನ (ಘೋಷಣೆ) ಹಾಡನ್ನೂ ತೆಗೆದು ಹಾಕಲಾಗಿತ್ತು. ಇದಕ್ಕೆ  60 ಲಕ್ಷಕ್ಕೂ ಹೆಚ್ಚು ವೀವ್‍ಗಳು ಅದಾಗಲೇ ದೊರಕಿದ್ದವು ಆದರೆ ರೈತ ಹೋರಾಟದ ಬೆಂಬಲಿಗರು ತಮ್ಮ ಬಳಿಯಿದ್ದ ಈ ಹಾಡಿನ ಮುದ್ರಣವನ್ನು ಅಪ್ಲೋಡ್ ಮಾಡಿದ್ದಾರೆ.

ಹಾಡಿನ ನಿರ್ಮಾಪಕರು ಹಾಗೂ ಗಾಯಕ ಕನ್ವರ್ ಗ್ರೇವಾಲ್ ಅವರನ್ನು ಈ ಕ್ರಮ ಧೃತಿಗೆಡಿಸಿಲ್ಲ, ಬದಲು ಅವರು ಐಲಾನ್ 2 ಬಿಡುಗಡೆಗೆ ಸಿದ್ಧತೆ ಮಾಡುತ್ತಿದ್ದಾರೆ.  ಗ್ರೇವಾಲ್ ಅವರು ರೈತ ಪ್ರತಿಭಟನೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News