ಇಸ್ರೇಲ್ ಬಂದೂಕಿನಿಂದ ಇರಾನ್ ಪರಮಾಣು ವಿಜ್ಞಾನಿ ಹತ್ಯೆ: ವರದಿ
Update: 2021-02-11 21:12 IST
ಲಂಡನ್, ಫೆ. 11: ಇರಾನ್‌ನ ಪರಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಯನ್ನು ಒಂದು ಟನ್ (1,000 ಕೆಜಿ ತೂಕ) ತೂಕದ ಬಂದೂಕಿನಿಂದ ಹತ್ಯೆ ಮಾಡಲಾಗಿದೆ ಹಾಗೂ ಈ ಬಂದೂಕನ್ನು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಬಿಡಿ ಬಿಡಿಯಾಗಿ ಇರಾನ್‌ನೊಳಗೆ ಕಳ್ಳಸಾಗಣೆ ಮಾಡಿದೆ ಎಂದು ಬ್ರಿಟನ್‌ನ ‘ದ ಜ್ಯೂಯಿಶ್ ಕ್ರಾನಿಕಲ್’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದು ಹೇಳಿದೆ.
ವಿಜ್ಞಾನಿಯನ್ನು ಕಳೆದ ವರ್ಷದ ನವೆಂಬರ್ 27ರಂದು ಇರಾನ್ ರಾಜಧಾನಿ ಟೆಹರಾನ್ ಹೊರವಲಯದಲ್ಲಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹತ್ಯೆ ಮಾಡಲಾಗಿತ್ತು.
ಇಸ್ರೇಲ್ ಮತ್ತು ಇರಾನ್ ರಾಷ್ಟ್ರೀಯರು ಸೇರಿದಂತೆ 20ಕ್ಕೂ ಅಧಿಕ ಏಜಂಟ್‌ಗಳ ತಂಡವೊಂದು, ಫಖ್ರಿಝಾದೆಯ ಚಲನವಲನಗಳ ಮೇಲೆ 8 ತಿಂಗಳ ಕಾಲ ನಿಗಾವಿಟ್ಟು ಅವರನ್ನು ಹತ್ಯೆ ಮಾಡಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಾರಪತ್ರಿಕೆ ತಿಳಿಸಿದೆ.