ಕಕ್ಷೆ ಬದಲಿಸಿದ ಚೀನಾದ ಮಂಗಳ ಗ್ರಹ ಶೋಧದ ನೌಕೆ ‘ತಿಯಾನ್‌ವೆನ್-1’

Update: 2021-02-15 18:46 GMT

ಬೀಜಿಂಗ್ (ಚೀನಾ0, ಫೆ. 15: ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಸೇರಿಕೊಂಡ ದಿನಗಳ ಬಳಿಕ, ಚೀನಾದ ಮಂಗಳ ಗ್ರಹ ಶೋಧಕ ನೌಕೆ ‘ತಿಯಾನ್‌ವೆನ್-1’ ಸೋಮವಾರ ತನ್ನ ಕಕ್ಷೆಯನ್ನು ಬದಲಿಸಿದೆ.

ನೌಕೆಯು ಮಂಗಳ ಗ್ರಹದ ಧ್ರುವಗಳ ಮೂಲಕ ಹಾದು ಹೋಗುವಂತೆ ನೋಡಿಕೊಳ್ಳುವುದಕ್ಕಾಗಿ ಅದರ ಪಥವನ್ನು ಸೋಮವಾರ ಸಂಜೆ 5 ಗಂಟೆಗೆ (ಬೀಜಿಂಗ್ ಕಾಲಮಾನ) ಬದಲಿಸಲಾಯಿತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

 ಕೆಂಪು ಗ್ರಹದ ಸಮೀಪಕ್ಕೆ ಹೋಗುವುದಕ್ಕಾಗಿ ಶೋಧಕ ನೌಕೆಯು ಇನ್ನೂ ಹಲವಾರು ಕಕ್ಷೆ ಪರಿಷ್ಕರಣೆಗಳನ್ನು ನಡೆಸಲಿದೆ ಎಂದು ಅದು ಹೇಳಿದೆ.

ಅಮೆರಿಕದ ಓಕ್ಲಹಾಮ ನಗರದಲ್ಲಿ ರವಿವಾರ ಹಿಮ ಬಿರುಗಾಳಿ ಬೀಸಿದ್ದು, ಹಿಮವನ್ನು ತೆರವುಗೊಳಿಸುವ ವಾಹನಗಳನ್ನು ರಸ್ತೆಗಳಲ್ಲಿ ನಿಯೋಜಿಸಲಾಗಿದೆ. ಅಮೆರಿಕದ ಹೆಚ್ಚಿನ ಭಾಗವನ್ನು ಹಿಮ ಮಾರುತ ಆವರಿಸಿದ್ದು, ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News