​ಕೋವಿಡ್-19 ವಿರುದ್ಧ ಹೋರಾಟದಲ್ಲಿ ಭಾರತ ಜಾಗತಿಕ ನಾಯಕ: ಗುಟೆರಸ್ ಪ್ರಶಂಸೆ

Update: 2021-02-21 16:09 GMT

 ವಿಶ್ವಸಂಸ್ಥೆ,ಫೆ.15: ಕೊರೋನ ವೈರಸ್ ಸೋಂಕಿನ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವವನ್ನು ಹಾಗೂ ಜಾಗತಿಕ ಮಾರುಕಟ್ಟೆಗೆ ಬೇಕಾಗುವಷ್ಟು ಕೋವಿಡ್-19 ಲಸಿಕೆಯನ್ನು ಪೂರೈಕೆ ಮಾಡಲು ಅದು ನಡೆಸುತ್ತಿರುವ ಪ್ರಯತ್ನಗಳನ್ನುವಿಶ್ವಸಂಸ್ಥೆ ವರಿಷ್ಠ ಆಂಟೊನಿಯೋ ಗ್ಯುಟೆರೆಸ್ ಶ್ಲಾಘಿಸಿದ್ದಾರೆ.


 ಈ ಬಗ್ಗೆ ಗುಟೆರೆಸ್ ಅವರು ಫೆಬ್ರವರಿ 17ರಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದಿರುವ ಪತ್ರವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ರಾಯಭಾರಿ ಟಿ.ಎಸ್. ತಿರುಮೂರ್ತಿ ರವಿವಾರ ಟ್ವೀಟ್ ಮಾಡಿದ್ದಾರೆ.


  ಮಹತ್ವದ ಔಷಧಿಗಳು, ರೋಗಪರೀಕ್ಷಾ ಕಿಟ್ಗಳು,ವೆಂಟಿಲೇಟರ್ಗಳು ಹಾಗೂ ವೈಯಕ್ತಿಕ ಸಂರಕ್ಷಣಾ ಸಲಕರಣೆಗಳನ್ನು ಒದಗಿಸುವ ಮೂಲಕ ಭಾರತವು ಸಾಂಕ್ರಾಮಿಕ ರೋಗದ ವಿರುದ್ಧದ ಪ್ರತಿಕ್ರಿಯಾತ್ಮಕ ಹೋರಾಟದಲ್ಲಿ ಖಂಡಿತವಾಗಿಯೂ ಜಾಗತಿಕ ನಾಯಕನಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನಕಾರ್ಯರ್ಶಿ ಪತ್ರದಲ್ಲಿ ಹೇಳಿದ್ದಾರೆ.


   ‘‘ ತುರ್ತು ಬಳಕೆಗೆ ವಿಶ್ವಸಂಸ್ಥೆಯಿಂದ ಆನುಮತಿಪಡೆದಿರುವ ಎರಡು ಲಸಿಕೆಗಳಲ್ಲಿ ಪೈಕಿ ಒಂದನ್ನು ಭಾರತವು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ವಿಶ್ವ ಲಸಿಕೆ ಮಾರುಕಟ್ಟೆಗೆ ಬೇಕಾಗುವಷ್ಟು ಲಸಿಕೆ ಪೂರೈಕೆಯಾಗುತ್ತಿದೆ’’ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News