ಪಿಡಿಪಿ ಅಧ್ಯಕ್ಷರಾಗಿ ಮೆಹಬೂಬಾ ಮುಫ್ತಿ ಮರು ಆಯ್ಕೆ

Update: 2021-02-22 16:38 GMT

ಶ್ರೀನಗರ, ಫೆ. 22: ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೋಮವಾರ ಪಿಡಿಪಿಯ ಅಧ್ಯಕ್ಷರಾಗಿ ಮೂರು ವರ್ಷಗಳಿಗೆ ಮರು ಆಯ್ಕೆಯಾಗಿದ್ದಾರೆ. ಮೆಹಬೂಬಾ ಮುಫ್ತಿ ಅವರ ಹೆಸರನ್ನು ಹಿರಿಯ ನಾಯಕ ಜಿ.ಎನ್.ಎಲ್. ಹಂಜುರಾ ಹಾಗೂ ಎರಡನೇಯದಾಗಿ ಖುರ್ಷಿದ್ ಆಲಂ ಅವರು ಪ್ರಸ್ತಾಪಿಸಿದರು.

‘‘ಮೆಹಬೂಬಾ ಮುಫ್ತಿ ಅವರು ಪಿಡಿಪಿ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ. ಅವರ ಹೆಸರನ್ನು ಹಿರಿಯ ನಾಯಕ ಜಿ.ಎನ್.ಎಲ್. ಹಂಜುರಾ ಹಾಗೂ ಎರಡನೇಯದಾಗಿ ಖುರ್ಷಿದ್ ಆಲಂ ಪ್ರಸ್ತಾಪಿಸಿದರು. ಹಿರಿಯ ನಾಯಕ ಎ.ಆರ್. ವೀರಿ ಪಕ್ಷದ ಚುನಾವಣಾ ಮಂಡಳಿಯ ಅಧ್ಯಕ್ಷರಾಗಿದ್ದರು’’ ಎಂದು ಪಿಡಿಪಿ ಟ್ವೀಟ್ ಮಾಡಿದೆ. 2016 ಜನವರಿಯಲ್ಲಿ ಮೆಹಬೂಬಾ ಮುಫ್ತಿ ಅವರ ತಂದೆ ಮುಹಮ್ಮದ್ ಸೈಯದ್ ಅವರ ನಿಧನದ ಬಳಿಕ ಅವರ ಉತ್ತರಾಧಿಕಾರಿಯಾಗಿ ಮುಫ್ತಿ ಅವರು 2016ರಿಂದ ಪಿಡಿಪಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News