"ಅವಳಿಂದಾಗಿಯೇ ನಾನು ಧೈರ್ಯಶಾಲಿಯಾಗಿ ಹೊರಹೊಮ್ಮಿದ್ದೇನೆ": ಮಗಳಿಗೆ ಜಾಮೀನು ದೊರಕಿದ ಬಳಿಕ ದಿಶಾ ರವಿ ತಾಯಿಯ ಹೇಳಿಕೆ

Update: 2021-02-23 16:34 GMT
photo: Ndtv.com

ಬೆಂಗಳೂರು: "ಟೂಲ್ ಕಿಟ್ " ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 13 ರಂದು ಬಂಧನಕ್ಕೊಳಗಾದ ಮತ್ತು ದೇಶದ್ರೋಹದ ಆರೋಪ ಹೊರಿಸಲ್ಪಟ್ಟ 22 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ಅವರ ತಾಯಿ ಎನ್ಡಿಟಿವಿಯೊಂದಿಗೆ ಮಾತನಾಡುತ್ತಾ, ದೇಶದ ಕಾನೂನು ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿದೆ ಮತ್ತು ಮಗಳಿಗೆ ಜಾಮೀನು ಸಿಕ್ಕಿದ್ದು ಸಂತೋಷವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

"ನನಗೆ ನಿರಾಳವಾಗಿದೆ, ನನಗೆ ತುಂಬಾ ಸಂತೋಷವಾಗಿದೆ. ಭಾರತದ ಕಾನೂನು ವ್ಯವಸ್ಥೆಯನ್ನು ನಾನು ನಂಬುತ್ತೇನೆ. ಭಾರತದಲ್ಲಿ ಸತ್ಯಕ್ಕೆ ಮೌಲ್ಯವಿದೆ" ಎಂದು ಅವರು ಹೇಳಿದರು, ಆದರೆ ತನ್ನ ಕಣ್ಣೀರನ್ನು ತಡೆಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ.

"ಅವಳನ್ನು ಬೆಂಬಲಿಸಿದ ಮತ್ತು ಆಕೆಗಾಗಿ ಹೊರ ಬಂದು ಧ್ವನಿಯೆತ್ತಿದ ಎಲ್ಲ ಜನರಿಗೆ ಹೇಗೆ ಧನ್ಯವಾದ ಹೇಳಬೇಕೆಂದು ನನಗೆ ತಿಳಿದಿಲ್ಲ. ಮಗಳು ಬೆಂಗಳೂರಿಗೆ ಮರಳಿದಾಗ ನಾನು ಅವಳನ್ನು ತಬ್ಬಿಕೊಂಡು ಆಹಾರ ನೀಡಲು ಬಯಸುತ್ತೇನೆ" ಎಂದು ಅವರು ಹೇಳಿದರು.

"ದಿಶಾ ನಮ್ಮೊಂದಿಗೆ ಮಾತನಾಡುವಾಗಲೆಲ್ಲಾ ಅವಳೇ ನಮಗೆ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ನೀಡುತ್ತಿದ್ದಳು. ನನ್ನ ಮಗಳು ತುಂಬಾ ಬಲಶಾಲಿ ಮತ್ತು ಧೈರ್ಯಶಾಲಿ. ಈ ಎಲ್ಲಾ ಪ್ರಕರಣಗಳ ನಂತರ ಅವಳ ಕಾರಣದಿಂದಲೇ ನಾನು ಬಲವಾದ ಧೈರ್ಯಶಾಲಿ ತಾಯಿಯಾಗಿ ಹೊರಹೊಮ್ಮಿದ್ದೇನೆ" ಎಂದು ಅವರು ಹೇಳಿದರು.

"ಇತರ ಪೋಷಕರಿಗೆ ನನ್ನ ಸಂದೇಶವೇನೆಂದರೆ, ನಾವು ನಮ್ಮ ಮಕ್ಕಳೊಂದಿಗೆ ಎಲ್ಲಾ ಸಂದರ್ಭಗಳಲ್ಲೂ ಜೊತೆಗೆ ನಿಲ್ಲಬೇಕು ಅಂತಹ ಕಷ್ಟದ ಸಮಯದಲ್ಲಿ ನಾವು ಅವರಿಗೆ ಬಲವಾಗಿರಬೇಕು" ಎಂದು ದಿಶಾ ರವಿ ತಂದೆ ಹೇಳಿದ್ದಾಗಿ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News