ಗುಜರಾತ್: ವಿಶ್ವದ ಅತಿದೊಡ್ಡ 'ನರೇಂದ್ರ ಮೋದಿ ಸ್ಟೇಡಿಯಂʼ ಉದ್ಘಾಟನೆ ಮಾಡಿದ ರಾಷ್ಟ್ರಪತಿ ಕೋವಿಂದ್

Update: 2021-02-24 08:00 GMT

ಅಹ್ಮದಾಬಾದ್:‌ ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಎಂಬ ಖ್ಯಾತಿಗೆ ಪಾತ್ರವಾಗಿರುವ ಅಹ್ಮದಾಬಾದ್‌ ನ ಮೊಟೇರಾ ಸ್ಟೇಡಿಯಂಗೆ ಪ್ರಧಾನಿ ʼನರೇಂದ್ರ ಮೋದಿʼ ಹೆಸರಿಡಲಾಗಿದೆ. ಈ ಸ್ಟೇಡಿಯಂ ಅನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಇಂದು ಉದ್ಘಾಟನೆ ಮಾಡಿದ್ದು, ಗೃಹ ಸಚಿವ ಅಮಿತ್‌ ಶಾ ಉಪಸ್ಥಿತರಿದ್ದರು. ಈ ಹಿಂದೆ ಈ ಸ್ಟೇಡಿಯಂಗೆ ಸರ್ದಾರ್‌ ಪಟೇಲ್‌ ಹೆಸರಿದ್ದು, ಸದ್ಯ ನರೇಂದ್ರ ಮೋದಿ ಹೆಸರಿನೊಂದಿಗೆ ಮರುನಾಮಕರಣ ಮಾಡಲಾಗಿದೆ. 

ಭೂಮಿ ಪೂಜೆಯೊಂದಿಗೆ ಸ್ಟೇಡಿಯಂ ಅನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಿದರು, ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ನಡೆಯಲಿರುವ ಕ್ರಿಕೆಟ್‌ ಪಂದ್ಯಾಟದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರದಂದು ಸ್ಟೇಡಿಯಂನಲ್ಲಿರಲು ನನಗೆ ಸಾಧ್ಯವಾಗಲಿಲ್ಲ. ಪಿಂಕ್‌ ಟೆಸ್‌ಟ ನಮ್ಮ ಕನಸಾಗಿತ್ತು. ಈ ಸ್ಟೇಡಿಯಂ ನಿರ್ಮಾಣಕ್ಕೆ ತುಂಬಾ ಶ್ರಮ ವಹಿಸಲಾಗಿದೆ. ಎಂದು ಸದ್ಯ ವಿಶ್ರಾಂತಿಯಲ್ಲಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಕ್ರೀಡಾ ಸಚಿವ ಕಿರಣ್‌ ರಿಜಿಜು ಹಾಗೂ ಇನ್ನಿತರ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News