ಕೇರಳ, ಅಸ್ಸಾಮ್‌ ಗೆ ತೆರಳುವ ಪ್ರಧಾನಿ ಮೋದಿಗೆ 20ಕಿ.ಮೀ ಪ್ರಯಾಣಿಸಿ ರೈತರನ್ನು ಭೇಟಿಯಾಗಲು ಸಮಯವಿಲ್ಲ"

Update: 2021-02-27 09:48 GMT

ನವದೆಹಲಿ: ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆಯ ಬಗ್ಗೆ ಕೇಂದ್ರದ ನಿಲುವನ್ನು ಟೀಕಿಸಿದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, "ಆರ್ಥಿಕ ಹಿಂಜರಿತ ವರ್ಷದಲ್ಲಿ ಶೇಕಡಾ 3.9 ರಷ್ಟು ಬೆಳೆದ ಕೃಷಿ ಕ್ಷೇತ್ರಕ್ಕೆ ದೊರಕುವ ಪ್ರತಿಫಲವೆಂದರೆ, ಪ್ರತಿಭಟನಾ ನಿರತ ರೈತರನ್ನು ಶತ್ರುಗಳಂತೆ ನೋಡಿಕೊಳ್ಳುವುದಷ್ಟೇ" ಎಂದು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಆರ್ಥಿಕ ಹಿಂಜರಿತ ವರ್ಷದಲ್ಲಿ ಶೇಕಡಾ 3.9 ರಷ್ಟು ಬೆಳವಣಿಗೆ ಹೊಂದಿರುವ ಕೃಷಿ ಕ್ಷೇತ್ರಕ್ಕೆ ದೊರಕುವ ಪ್ರತಿಫಲವೆಂದರೆ ಪ್ರತಿಭಟನಾ ನಿರತ ರೈತರನ್ನು ಅವರು ರಾಜ್ಯದ ಶತ್ರುಗಳಂತೆ ನೋಡಿಕೊಳ್ಳುವುದು" ಎಂದು ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಕೇರಳದಿಂದ ಅಸ್ಸಾಂಗೆ ಪ್ರಯಾಣಿಸುತ್ತಿದ್ದರೂ ರೈತರನ್ನು ಭೇಟಿಯಾಗಲು 20 ಕಿ.ಮೀ ಪ್ರಯಾಣಿಸಲು ಸಮಯವಿಲ್ಲ ಎಂದು ಅವರು ಆರೋಪಿಸಿದರು. "ಪ್ರಧಾನಿ ಕೇರಳದಿಂದ ಅಸ್ಸಾಂಗೆ ಪ್ರಯಾಣಿಸುತ್ತಾರೆ ಆದರೆ ದೆಹಲಿಯ ಗಡಿಯಲ್ಲಿರುವ ರೈತರನ್ನು ಭೇಟಿ ಮಾಡಲು 20 ಕಿ.ಮೀ ಪ್ರಯಾಣಿಸಲು ಸಮಯ ಅಥವಾ ಒಲವು ಇಲ್ಲ" ಎಂದು ಅವರು ಆರೋಪಿಸಿದರು.

ಶೇಕಡಾ 6 ರಷ್ಟು ರೈತರು ಮಾತ್ರ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಮಾರಾಟ ಮಾಡಲು ಸಮರ್ಥರಾಗಿದ್ದಾರೆ ಎಂದು ಅವರು ಹೇಳಿದರು.

"ಆದರೂ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸಿದ್ದಾರೆ ಎಂದು ಅವರು ಹೇಳಿಕೊಳ್ಳುತ್ತಾರೆ. ಸತ್ಯವೇನೆಂದರೆ, ಕೇವಲ 6 ಪ್ರತಿಶತದಷ್ಟು ರೈತರು ಮಾತ್ರ ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಮರ್ಥರಾಗಿದ್ದಾಗ ಎಲ್ಲಾ ರೈತರು ಎಂಎಸ್ಪಿ ಪಡೆಯುತ್ತಾರೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News