ಹೈಕಮಿಷನ್ ಮರು ನಿಯೋಜನೆಯ ಕುರಿತು ಭಾರತ-ಪಾಕ್ ಚಿಂತನೆ

Update: 2021-03-01 17:13 GMT

ಹೊಸದಿಲ್ಲಿ, ಮಾ. 1: ಭಾರತ ಹಾಗೂ ಪಾಕಿಸ್ತಾನ ಕಳೆದ ವಾರ ಅಚ್ಚರಿಯಾಗಿ ಕದನ ವಿರಾಮ ಘೋಷಿಸಿದ ಬಳಿಕ ಉಭಯ ದೇಶಗಳು ಹೊಸದಿಲ್ಲಿ ಹಾಗೂ ಇಸ್ಲಮಾಬಾದ್‌ನಲ್ಲಿ ತಮ್ಮ ಹೈಕಮಿಷನರ್ ಅನ್ನು ಮರು ನಿಯೋಜಿಸಲು ಗಂಭೀರವಾಗಿ ಚಿಂತಿಸುತ್ತಿದೆ.

2019 ಫೆಬ್ರವರಿಯಲ್ಲಿ ನಡೆದ ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನಗಳು ತಮ್ಮ ಹೈಕಮಿಷನರ್‌ಗಳನ್ನು ಹಿಂದೆ ಕರೆಸಿಕೊಂಡಿದ್ದವು. ಇದರಿಂದ ಉಭಯ ದೇಶಗಳ ಹೈಕಮಿಷನ್‌ಗೆ ಇದುವರೆಗೆ ಮುಖ್ಯಸ್ಥರು ಇರಲ್ಲಿಲ್ಲ. 2002ರಲ್ಲಿ ಪರಾಕ್ರಮ ಕಾರ್ಯಾಚರಣೆ ಉತ್ತುಂಗದಲ್ಲಿದ್ದಾಗ ಉಭಯ ದೇಶಗಳು ತಮ್ಮ ಹೈ ಕಮಿಷನರ್‌ಗಳನ್ನು ಹಿಂದೆ ಕರೆಸಿಕೊಂಡಿದ್ದವು.

ಇದು ಅಂತಿಮವಾಗಿ ಜನರಲ್ ಮುಷರಫ್ ಹಾಗೂ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಡುವಿನ 2003ರ ಕದನ ವಿರಾಮ ಒಪ್ಪಂದಕ್ಕೆ ಕಾರಣವಾಗಿತ್ತು. ಅಲ್ಲದೆ 2004 ಜನವರಿಯಲ್ಲಿ ನಡೆದ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ವಾಜಪೇಯಿ ಅವರು ಇಸ್ಲಾಮಾಬಾದ್‌ಗೆ ಪ್ರಯಾಣಿಸಿದ್ದರು. ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷಾಂತ್ಯದಲ್ಲಿ ಇಸ್ಲಮಾಬಾದ್‌ಗೆ ತೆರಳುವ ಸಾಧ್ಯತೆ ಕ್ಷೀಣವಾಗಿದ್ದರೂ ಈ ಹಿಂದಿನ ಬೆಳವಣಿಗೆಯೇ ಪುನಾರಾವರ್ತನೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜಕೀಯ ಮಾತ್ರವಲ್ಲ ರಾಜತಾಂತ್ರಿಕತೆ ಕೂಡ ಕೆಲಸ ಮಾಡುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News