ಉಗಾಂಡಾ ಪ್ರಶಸ್ತಿ ಜಯಿಸಿದ ವರುಣ್, ಮಾಳವಿಕಾ

Update: 2021-03-01 18:11 GMT

​ಕಂಪಾಲಾ, ಮಾ.1: ಇಲ್ಲಿ ನಡೆದ 2021ರ ಉಗಾಂಡಾ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಶಟ್ಲರ್‌ಗಳಾದ ವರುಣ್ ಕಪೂರ್ ಮತ್ತು ಮಾಳವಿಕಾ ಬನ್ಸೋಡ್‌ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವರುಣ್ ಏಳನೇ ಶ್ರೇಯಾಂಕಿತ ಶಂಕರ್ ಮುತ್ತುಸ್ವಾಮಿ ಅವರನ್ನು 21-18, 16-21, 21-17 ಅಂತರದಿಂದ ಮಣಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕಿತ ಮಾಳವಿಕಾ 17-21, 25-23, 21-10 ಅಂತರದಲ್ಲಿ ಭಾರತದ ಅನುಪಮಾ ಉಪಾಧ್ಯಾಯ ವಿರುದ್ಧ ಜಯ ಸಾಧಿಸಿದರು.

ಜೂನಿಯರ್ ವಿಭಾಗದ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವ ಮತ್ತು ಈ ವರ್ಷದ ಆರಂಭದಲ್ಲಿ ಆರನೇ ಪ್ರಶಸ್ತಿಯನ್ನು ಗೆದ್ದ ವರುಣ್ ಮೊದಲು ಹಿನ್ನಡೆ ಅನುಭವಿಸಿದರೂ ಬಳಿಕ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರು. ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಹರ್ಯಾಣ ಹುಡುಗಿ ಅನುಪಮಾ ಮೊದಲ ಗೇಮ್‌ನ್ನು ಗೆಲ್ಲುವ ಮೂಲಕ ಆರಂಭಿಕ ಮುನ್ನಡೆ ಸಾಧಿಸಿದರು.ಆದಾಗ್ಯೂ, 19 ವರ್ಷದ ಮಾಳವಿಕಾ ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡು ಗೆಲುವಿನ ನಗೆ ಬೀರಿದರು.

ನಾಲ್ಕು ದಿನಗಳ ಪಂದ್ಯಾವಳಿಯಲ್ಲಿ ಶಂಕರ್ ಮತ್ತು ಅನುಪಮಾ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News