ಇಂಗ್ಲೆಂಡ್‌ನ ಬ್ಯಾಟಿಂಗ್ ಕೋಚ್ ಆಗಿ ಟ್ರೆಸ್ಕೊಥಿಕ್

Update: 2021-03-01 18:22 GMT

ಅಹಮದಾಬಾದ್: ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಇಂಗ್ಲೆಂಡ್‌ನ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಕಸ್ ಟ್ರೆಸ್ಕೊಥಿಕ್‌ರನ್ನು ನೇಮಕ ಮಾಡಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸೋಮವಾರ ತಿಳಿಸಿದೆ.

ಇಂಗ್ಲೆಂಡ್ ಪರ 76 ಟೆಸ್ಟ್ ಪಂದ್ಯಗಳನ್ನು ಆಡಿದ ಟ್ರೆಸ್ಕೊಥಿಕ್ 2005ರಲ್ಲಿ ಆ್ಯಶಸ್‌ಗೆಲ್ಲಲು ಸಹಾಯ ಮಾಡಿದ್ದರು. ತನ್ನ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಮರ್‌ಸೆಟ್‌ನ ಸಹಾಯಕ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ನ್ಯೂಝಿಲ್ಯಾಂಡ್‌ನ ಮಾಜಿ ಆಫ್ ಸ್ಪಿನ್ನರ್ ಜೀತನ್ ಪಟೇಲ್‌ರನ್ನು ಇಂಗ್ಲೆಂಡ್‌ನ ಸ್ಪಿನ್ ಬೌಲಿಂಗ್ ಕೋಚ್ ಮತ್ತು ಯುವ ತಂಡದ ಮುಖ್ಯ ಕೋಚ್ ಜಾನ್ ಲೂಯಿಸ್ ಅವರಿಗೆ ರಾಷ್ಟ್ರೀಯ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಭಡ್ತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News