ಉತ್ತರಪ್ರದೇಶ: ಮೂವರು ಬಾಲಕಿಯರು ನಾಪತ್ತೆ

Update: 2021-03-02 16:41 GMT

ಶಹಾಜಹಾನ್‌ಪುರ (ಉತ್ತರಪ್ರದೇಶ), ಮಾ. 3: ಮನೆಯಿಂದ ಶಾಲೆಗೆ ತೆರಳಿದ್ದ ಮೂವರು ಬಾಲಕಿಯರು ನಾಪತ್ತೆಯಾದ ಪ್ರಕರಣ ಉತ್ತರಪ್ರದೇಶದ ಶಹಾಜಹಾನ್‌ಪುರದಿಂದ ವರದಿಯಾಗಿದೆ.

ಇಬ್ಬರು ಬಾಲಕಿಯರಿಗೆ 15 ವರ್ಷ. ಇನ್ನೋರ್ವ ಬಾಲಕಿಗೆ 10 ವರ್ಷ. ಈ ಮೂವರು ಬಾಲಕಿಯರು ಪ್ರತ್ಯೇಕ ಸ್ಥಳದಲ್ಲಿ ವಾಸಿಸುತ್ತಿದ್ದರು. ಆದರೆ, ಒಂದೇ ಶಾಲೆಗೆ ಹೋಗುತ್ತಿದ್ದರು. ಓರ್ವ ಬಾಲಕಿ 2,500 ಹಾಗೂ ಇನ್ನೋರ್ವ ಬಾಲಕಿ 2,700 ರೂಪಾಯಿ ಹಾಗೂ ಬಟ್ಟೆಬರೆಯನ್ನು ಕೊಂಡೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಹೇಳಿದ್ದಾರೆ. ನಾಪತ್ತೆಯಾದ ಈ ಮೂವರು ಬಾಲಕಿಯರಿಗಾಗಿ ಮೂರು ತಂಡಗಳನ್ನು ರಚಿಸಿ ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News