ಸಂಸದೀಯ ಸಮಿತಿ ಉಪಾಧ್ಯಕ್ಷೆಯಾಗಿ ಪ್ರಮೀಳಾ ಜಯಪಾಲ್

Update: 2021-03-04 17:04 GMT
ಫೋಟೊ ಕೃಪೆ: twitter.com

ವಾಶಿಂಗ್ಟನ್, ಮಾ. 4: ಅಮೆರಿಕದ ಏಕಸ್ವಾಮ್ಯನಿಗ್ರಹ, ವ್ಯಾಪಾರ ಮತ್ತು ಆಡಳಿತ ಕಾನೂನು ಕುರಿತ ಉಪಸಮಿತಿಯ ಉಪಾಧ್ಯಕ್ಷರನ್ನಾಗಿ ಭಾರತೀಯ ಅವೆುರಿಕನ್ ಸಂಸದೆ ಪ್ರಮೀಳಾ ಜಯಪಾಲ್‌ರನ್ನು ನೇಮಿಸಲಾಗಿದೆ.

ಚೆನ್ನೈಯಲ್ಲಿ ಜನಿಸಿರುವ 55 ವರ್ಷದ ಪ್ರಮೀಳಾ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಸದಸ್ಯೆಯಾಗಿದ್ದು, ಏಕಸ್ವಾಮ್ಯ ನಿಗ್ರಹ, ಸ್ಪರ್ಧಾತ್ಮಕತೆ ವಿರೋಧಿ ವರ್ತನೆ, ಪತ್ರಿಕಾ ಸ್ವಾತಂತ್ರ ರಕ್ಷಣೆ ಮುಂತಾದ ತುರ್ತು ವಿಷಯಗಳ ಮೇಲುಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News