ಫೆಸಿಫಿಕ್‌ನಲ್ಲಿ ಪ್ರಬಲ ಭೂಕಂಪದ ಬಳಿಕ ಸುನಾಮಿ

Update: 2021-03-05 17:26 GMT

ನ್ಯೂಝಿಲೆಂಡ್ : ದಕ್ಷಿಣ ಫೆಸಿಫಿಕ್‌ನಲ್ಲಿ ಗುರುವಾರ ಸಂಭವಿಸಿದ ಪ್ರಬಲ ಭೂಕಂಪದ ಬಳಿಕ ಸುನಾಮಿ ಅಲೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್, ಕಲೆಡೋನಿಯಾ ಮತ್ತು ವನುತು ಕರಾವಳಿ ಪ್ರದೇಶಗಳಿಂದ ಶುಕ್ರವಾರ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ.

"ಸುನಾಮಿ ಅಲೆಗಳು ಕಂಡುಬಂದಿವೆ" ಎಂದು ಹವಾಯಿಯಲ್ಲಿರುವ ಫೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಹೇಳಿಕೆ ನೀಡಿದೆ.

ಟೋಂಗಾದ ರಾಜಧಾನಿ ನುಕ್ಯುಲೋಫಾ ಬಳಿ ಆರಂಭಿಕವಾಗಿ 1.3 ಇಂಚಿನ ಸಣ್ಣ ಅಲೆಗಳು ಕಂಡುಬಂದಿವೆ ಎಂದು ಸ್ಪಷ್ಟಪಡಿಸಿದೆ. ಇವು ಸಾಗರದಲ್ಲಿ ಮುಂದಕ್ಕೆ ಚಲಿಸಿದಂತೆಲ್ಲ ಪ್ರಬಲ ಅಲೆಗಳಾಗಿ ಹೊರಹೊಮ್ಮಲಿವೆ ಎಂದು ಹೇಳಿದೆ.

ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ವನೌತು ಮತ್ತು ಫ್ರಾನ್ಸ್ ಪ್ರದೇಶದ ನ್ಯೂ ಕೆಲೆಡೋನಿಯಾ ಪ್ರದೇಶಗಳ ಮೇಲೆ 3 ಮೀಟರ್ ಎತ್ತರದ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ತಿಳಿಯಾದ ಸುನಾಮಿ ಬೆದರಿಕೆ

ನ್ಯೂಝಿಲ್ಯಾಂಡ್ ಶುಕ್ರವಾರ ಸುನಾಮಿ ಎಚ್ಚರಿಕೆಯನ್ನು ಬಳಿಕೆ ಹಿಂದಕ್ಕೆ ಪಡೆದುಕೊಂಡಿದ್ದು, ವೆುನೆಗಳನ್ನು ತೊರೆದಿದ್ದ ತೀರ ಪ್ರದೇಶಗಳ ಸಾವಿರಾರು ಜನರು ಸಂಜೆಯ ವೇಳೆಗೆ ಮನೆಗೆ ವಾಪಸಾಗಿದ್ದಾರೆ.

‘‘ಬೃಹತ್ ಅಲೆಗಳು ಈಗ ಹಾದುಹೋಗಿವೆ ಎಂಬುದಾಗಿ ಜಿಎನ್‌ಎಸ್ ಸಯನ್ಸ್ ಹೇಳಿದೆ. ಹಾಗಾಗಿ, ಬೆದರಿಕೆಯ ಮಟ್ಟವನ್ನು ಈಗ ಒಂದು ಬೀಚ್‌ಗೆ ಮಾತ್ರ ಅನ್ವಯವಾಗುವಂತೆ ಇಳಿಸಲಾಗಿದೆ’’ ಎಂದು ರಾಷ್ಟ್ರೀಯ ತುರ್ತು ವಿಪತ್ತು ಸಂಸ್ಥೆ ಹೇಳಿಕೆಯೊಂದರಲ್ಲಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News