ತೃತೀಯ ಲಿಂಗಿಗಳಿಂದ ರಕ್ತದಾನ ನಿಷೇಧಿಸಿರುವ ಮಾರ್ಗಸೂಚಿ ಕುರಿತು ಕೇಂದ್ರಕ್ಕೆ ಸುಪ್ರೀಂ ನೋಟಿಸ್

Update: 2021-03-05 15:55 GMT

 ಹೊಸದಿಲ್ಲಿ,ಮಾ.5: ತೃತೀಯ ಲಿಂಗಿಗಳಿಂದ ರಕ್ತದಾನವನ್ನು ಸಾರಾಸಗಟಾಗಿ ನಿಷೇಧಿಸಿರುವ ರಕ್ತದಾನಿಗಳ ಮಾರ್ಗಸೂಚಿ,2017ರ 12 ಮತ್ತು 51ನೇ ಕಲಮ್‌ಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ಇತರರಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನೋಟಿಸುಗಳನ್ನು ಹೊರಡಿಸಿದೆ.

ಅರ್ಜಿದಾರ ಸಂತಾ ಸಿಂಗ್ ಅವರು ಈ ಕಲಮ್‌ಗಳನ್ನು ತಡೆಹಿಡಿಯುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

‘ಇವೆಲ್ಲ ವೈದ್ಯಕೀಯ ವಿಚಾರಗಳು ಮತ್ತು ನಮಗೆ ಇವು ಅರ್ಥವಾಗುವುದಿಲ್ಲ ’ ಎಂದು ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಹೇಳಿತಾದರೂ ಕೇಂದ್ರ ಸರಕಾರಕ್ಕೆ ನೋಟಿಸನ್ನು ಹೊರಡಿಸಿತು. ಈ ವಿಷಯದಲ್ಲಿ ವಿವರವಾಗಿ ಉತ್ತರಿಸುವಂತೆ ಅದು ಸರಕಾರಕ್ಕೆ ಸೂಚಿಸಿದೆ.

ಹಾಲಿ ರಕ್ತದಾನಿಗಳ ಮಾರ್ಗಸೂಚಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ವಿಷಯವನ್ನು ತಿಳಿದುಕೊಳ್ಳದೆ ತಾನು ಆದೇಶಗಳನ್ನು ಹೊರಡಿಸುವುದಿಲ್ಲ ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News