ದುಬೈ ರಾಜಕುಮಾರಿ ಜೀವಂತ ಇದ್ದಾರೆ ಎನ್ನುವ ಪುರಾವೆ ಸಿಕ್ಕಿಲ್ಲ: ವಿಶ್ವಸಂಸ್ಥೆ

Update: 2021-03-05 16:26 GMT

 ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 5: ದುಬೈ ರಾಜಕುಮಾರಿ ಶೇಖಾ ಲತೀಫಾ ಈಗಲೂ ಜೀವಂತವಾಗಿದ್ದಾರೆ ಎನ್ನುವುದನ್ನು ತೋರಿಸುವ ಯಾವುದೇ ಪುರಾವೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈವರೆಗೆ ನೀಡಿಲ್ಲ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.

ದುಬೈಯ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್‌ರ ಮಗಳು ಜೀವಂತವಾಗಿರುವುದಕ್ಕೆ ಪುರಾವೆ ನೀಡುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಹದಿನೈದು ದಿನಗಳ ಹಿಂದೆ ಕೋರಿತ್ತು.

ನನ್ನನ್ನು ಬಂಧನದಲ್ಲಿ ಇಡಲಾಗಿದೆ ಹಾಗೂ ನನ್ನ ಜೀವಕ್ಕೆ ಅಪಾಯವಿದೆ ಎಂಬುದಾಗಿ ಲತೀಫಾ ಹೇಳುವ ವೀಡಿಯೊವೊಂದನ್ನು ಬಿಬಿಸಿ ಪ್ರಸಾರ ಮಾಡಿದ ಬಳಿಕ, ವಿಶ್ವಸಂಸ್ಥೆಯು ಈ ಪುರಾವೆಯನ್ನು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News