ಗುಜರಾತಿನ ಕಛ್ ಜಿಲ್ಲೆಯಲ್ಲಿ ಸೌಮ್ಯ ಸ್ವರೂಪದ ಭೂಕಂಪ

Update: 2021-03-08 17:15 GMT

ಗಾಂಧಿನಗರ,ಮಾ.8: ಗುಜರಾತಿನ ಕಛ್ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 3.2ರಷ್ಟಿದ್ದ ಸೌಮ್ಯ ಸ್ವರೂಪದ ಭೂಕಂಪವು ಸಂಭವಿಸಿದ್ದು,ಯಾವುದೇ ಸಾವುನೋವು ಅಥವಾ ಆಸ್ತಿನಷ್ಟ ವರದಿಯಾಗಿಲ್ಲ ಎಂದು ಜಿಲ್ಲಾಡಳಿತವು ತಿಳಿಸಿದೆ.

ಬೆಳಿಗ್ಗೆ 7:32ಕ್ಕೆ ಭೂಮಿ ನಡುಗಿದ್ದು,ಭೂಕಂಪದ ಕೇಂದ್ರಬಿಂದು ಕಛ್ ಜಿಲ್ಲೆಯ ದುಧಾಯಿಯಿಂದ ಪೂರ್ವ-ಈಶಾನ್ಯಕ್ಕೆ 13 ಕಿ.ಮೀ.ದೂರದಲ್ಲಿ ನೆಲದಡಿ 18.6 ಕಿ.ಮೀ.ಆಳದಲ್ಲಿತ್ತು ಎಂದು ಇಲ್ಲಿಯ ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆಯು ತಿಳಿಸಿದೆ.

ಕಛ್ ಅತ್ಯಂತ ಅಪಾಯಕಾರಿ ಭೂಕಂಪ ವಲಯದಲ್ಲಿದೆ. 2001,ಜನವರಿ 26ರಂದು 20,000ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದ್ದ ವಿನಾಶಕಾರಿ ಭೂಕಂಪಕ್ಕೆ ಜಿಲ್ಲೆಯು ಸಾಕ್ಷಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News