ಅಮೆರಿಕನ್ನರಿಗೆ ಲಸಿಕೆ ನೀಡಿ ಉಳಿದರೆ ಮಾತ್ರ ಇತರರಿಗೆ ನೀಡುತ್ತೇವೆ: ಬೈಡನ್ ಹೇಳಿಕೆ

Update: 2021-03-11 16:48 GMT

ವಾಶಿಂಗ್ಟನ, ಮಾ. 11: ಅಮೆರಿಕ ಸರಕಾರವು ಮೊದಲು ಅಮೆರಿಕನ್ನರಿಗೆ ಕೋವಿಡ್-19 ಲಸಿಕೆಯನ್ನು ನೀಡುತ್ತದೆ ಹಾಗೂ ಉಳಿದರೆ ಇತರ ದೇಶಗಳಿಗೆ ಕೊಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಹೇಳಿದ್ದಾರೆ.

‘‘ನಾವು ಲಸಿಕಾ ಅಭಿಯಾನವನ್ನು ಆರಂಭಿಸುತ್ತಿದ್ದೇವೆ ಹಾಗೂ ಲಸಿಕೆಯು ಮೊದಲು ಅಮೆರಿಕನ್ನರಿಗೆ ಸಿಗುವಂತೆ ನೋಡಿಕೊಳ್ಳುತ್ತೇವೆ. ಬಳಿಕ, ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್ ಹೇಳಿದರು.

‘‘ನಮಗೆ ಹೆಚ್ಚಾದರೆ, ನಾವು ಲಸಿಕೆಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುತ್ತೇವೆ’’ ಎಂದರು.

ಅಭಿವೃದ್ಧಿಶೀಲ ದೇಶಗಳಲ್ಲಿ ಲಸಿಕೆಗಳ ವಿತರಣೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಸ್ಥಾಪಿಸಿರುವ ‘ಕೋವ್ಯಾಕ್ಸ್’ ಕಾರ್ಯಕ್ರಮಕ್ಕೆ ನಾವು 4 ಬಿಲಿಯ ಡಾಲರ್ ನೀಡುತ್ತೇವೆ ಎಂಬುದಾಗಿ ಈಗಾಗಲೇ ಘೋಷಿಸಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News