ಮಕ್ಕಳ ಬೆಳವಣಿಗೆಗೆ ಅಡ್ಡಗಾಲಿಟ್ಟ ಕೊರೋನ ವೈರಸ್: ಯುನಿಸೆಫ್

Update: 2021-03-11 16:56 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್ (ಅಮೆರಿಕ), ಮಾ. 11: ಮುಚ್ಚಿದ ಶಾಲೆಗಳು, ಹೆಚ್ಚುತ್ತಿರುವ ಬಡತನ, ಬಲವಂತದ ಮದುವೆಗಳು ಮತ್ತು ಖಿನ್ನತೆ- ಹೀಗೆ ಕೊರೋನ ಪೀಡಿತ ಒಂದು ವರ್ಷದ ಬಳಿಕ, ಮಕ್ಕಳ ಅಭಿವೃದ್ಧಿಯನ್ನು ಅಳೆಯುವ ಎಲ್ಲ ಸೂಚ್ಯಂಕಗಳು ಹಿಮ್ಮುಖವಾಗಿ ಚಲಿಸಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಗುರುವಾರ ಎಚ್ಚರಿಸಿದೆ.

ಈ ಹಿನ್ನಡೆಯು ಇಡೀ ತಲೆಮಾರೊಂದರ ಮೇಲೆ ಶಾಶ್ವತ ಕಪ್ಪುಚುಕ್ಕೆಯಾಗಿರುತ್ತದೆ ಎಂದು ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್)ಯ ಕಾರ್ಯಕಾರಿ ನಿರ್ದೇಶಕಿ ಹೆನ್ರಿಟಾ ಫೋರ್ ಹೇಳಿದ್ದಾರೆ.

ಕೋವಿಡ್-19 ಕಾಯಿಲೆಯನ್ನು ಸಾಂಕ್ರಾಮಿಕ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ವರ್ಗೀಕರಿಸಿದ ಒಂದು ವರ್ಷದ ಬಳಿಕ ನೀಡಿದ ಹೇಳಿಕೆಯೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘‘ಹಸಿದ, ಪ್ರತ್ಯೇಕಗೊಂಡ, ಶೋಷಣೆಗಳಗಾದ, ಬಡತನದಲ್ಲಿ ಜೀವಿಸುತ್ತಿರುವ ಹಾಗೂ ಬಲವಂತದ ಮದುವೆಗಳಿಗೆ ಒಳಗಾದ ಮಕ್ಕಳ ಸಂಖ್ಯೆ ಈ ಒಂದು ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News