ಪಿತೂರಿ ಆರೋಪದಿಂದ ದೂರವುಳಿದ ಮಮತಾ ಬ್ಯಾನರ್ಜಿ
Update: 2021-03-11 23:26 IST
ಕೋಲ್ಕತಾ,ಮಾ.11: ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತನ್ನ ಕಾಲಿಗೆ ಗಾಯವಾಗಿದ್ದಕ್ಕೆ ‘ದಾಳಿ ಮತ್ತು ಪಿತೂರಿ’ ಕಾರಣವೆಂಬ ಆರೋಪದಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಅಂತರವನ್ನು ಕಾಯ್ದುಕೊಂಡಿದ್ದಾರೆ. ಚಿಕಿತ್ಸೆಗೆ ದಾಖಲಾಗಿರುವ ಇಲ್ಲಿಯ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ವೀಡಿಯೊ ಸಂದೇಶದಲ್ಲಿ, ತಾನು ಕಾರಿನ ಫುಟ್‌ಬೋರ್ಡ್‌ನಲ್ಲಿದ್ದಾಗ ಗುಂಪಿನ ನೂಕುನುಗ್ಗಲಿನಿಂದಾಗಿ ಬಾಗಿಲು ಮತ್ತು ಮುಂದಿನ ಆಸನದ ನಡುವೆ ಅಪ್ಪಚ್ಚಿಯಾಗಿದ್ದೆ ಎಂದು ಹೇಳಿದ್ದಾರೆ.
ಘಟನೆಗೆ ಯಾವುದೇ ರಾಜಕೀಯ ಪಕ್ಷವನ್ನು ದೂರದ ಅವರು ಶಾಂತಿ ಮತ್ತು ಸಹನೆಯನ್ನು ಕಾಯ್ದುಕೊಳ್ಳುವಂತೆ ತನ್ನ ಬೆಂಬಲಿಗರನ್ನು ಆಗ್ರಹಿಸಿದ್ದಾರೆ.