ನಂದಿಗ್ರಾಮ ಘಟನೆ: ಮಮತಾ ಬ್ಯಾನರ್ಜಿಯ ಭದ್ರತಾ ನಿರ್ದೇಶಕನ ಅಮಾನತುಗೊಳಿಸಿದ ಚು.ಆಯೋಗ

Update: 2021-03-14 13:23 GMT

ಹೊಸದಿಲ್ಲಿ: ನಂದಿಗ್ರಾಮ ಘಟನೆಗೆ ಸಂಬಂಧಿಸಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಭದ್ರತಾ ನಿರ್ದೇಶಕ ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ಅವರನ್ನು ಚುನಾವಣಾ ಆಯೋಗವು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಮಾರ್ಚ್ 10ರಂದು ನಂದಿಗ್ರಾಮದಲ್ಲಿ ಮಮತಾ ಅವರ ಕಾಲಿಗೆ ಗಾಯವಾಗಲು ಕಾರಣವಾದ ಭದ್ರತಾ ಲೋಪಕ್ಕೆ ಸಂಬಂಧಿಸಿ ಸಹಾಯ್ ವಿರುದ್ಧ ಆರೋಪ ದಾಖಲಾಗುವ ಸಾಧ್ಯತೆಯಿದೆ.

ಝೆಡ್ ಪ್ಲಸ್ ಭದ್ರತೆ ಹೊಂದಿರುವ ಮಮತಾ ಅವರಿಗೆ ರಕ್ಷಣೆ ನೀಡಲು ವಿಫಲವಾಗಿರುವ ಕಾರಣ ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ವಿರುದ್ಧ ಒಂದು ವಾರದೊಳಗೆ ಆರೋಪ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಪಿಯೊಂದಿಗೆ ಸಮಾಲೋಚಿಸಿ ಹಾಗೂ ಈಗಿರುವ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ಅವರನ್ನು ತಕ್ಷಣ ಪೋಸ್ಟ್ ಮಾಡುವಂತೆ ಚುನಾವಣಾ ಆಯೋಗವು ಬಂಗಾಳದ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಡೋಪಧ್ಯಾಯರಿಗೆ ತಿಳಿಸಿದೆ.

ಪುರ್ಬಿ ಮದಿನಿಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಪ್ರವೀಣ್ ಪ್ರಕಾಶ್ ಅವರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಮಮತಾ ಅವರ ಮಾರ್ಚ್ 10ರ ನಂದಿಗ್ರಾಮ ಸಾರ್ವಜನಿಕ ಸಂವಹನಕ್ಕಾಗಿ ಸಮರ್ಪಕ ಭದ್ರತಾ ವ್ಯವಸ್ಥೆಗಳನ್ನು ಮಾಡುವಲ್ಲಿ ವಿಫಲರಾದ ಕಾರಣ ಎಸ್ಪಿ ಪ್ರವೀಣ್ ಪ್ರಕಾಶ್ ವಿರುದ್ಧವೂ ಆರೋಪ ದಾಖಲಿಸಲಾಗುವುದು. ಈ ಸಂಬಂಧ ಪೊಲೀಸ್ ತನಿಖೆ ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕಾಗಿದ್ದು, ಮಾ.31ರೊಳಗೆ ವರದಿಯನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News