ಎರಡನೇ ಟ್ವೆಂಟಿ-20: ಭಾರತಕ್ಕೆ 165 ರನ್ ಗುರಿ
ಅಹಮದಾಬಾದ್: ಆರಂಭಿಕ ಬ್ಯಾಟ್ಸ್ ಮನ್ ಜೇಸನ್ ರಾಯ್ ಏಕಾಂಗಿ ಹೋರಾಟದ(46 ರನ್)ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.
ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರವಿವಾರ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನ್ನು ಬ್ಯಾಟಿಂಗ್ ಗೆ ಇಳಿಸಿದರು.
ಇಂಗ್ಲೆಂಡ್ ಪರ ಜೇಸನ್ ರಾಯ್ (46 ರನ್, 35 ಎಸೆತ, 4 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಇಯಾನ್ ಮೊರ್ಗನ್ (28), ಡೇವಿಡ್ ಮಲನ್(24), ಬೆನ್ ಸ್ಟೋಕ್ಸ್ (24) ಹಾಗೂ ಜಾನಿ ಬೈರ್ ಸ್ಟೋವ್ (20) ಎರಡಂಕೆಯ ಸ್ಕೋರ್ ಗಳಿಸಿದರು.
ಜೋಸ್ ಬಟ್ಲರ್ ಇನಿಂಗ್ಸ್ ನ ಮೊದಲ ಓವರ್ ನ 3ನೇ ಎಸೆತದಲ್ಲಿ ರನ್ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು.
ಜೇಸನ್ ರಾಯ್ ಹಾಗೂ ಡೇವಿಡ್ ಮಲಾನ್ ಎರಡನೇ ವಿಕೆಟ್ ಗೆ 63 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಇದು ಇಂಗ್ಲೆಂಡ್ ಇನಿಂಗ್ಸ್ ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.
ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ (2-29), ಶಾರ್ದೂಲ್ ಠಾಕೂರ್ (2-29) ತಲಾ ಎರಡು ವಿಕೆಟ್ ಪಡೆದರೆ, ಭುವನೇಶ್ವರ ಕುಮಾರ್ (1-28) ಹಾಗೂ ಯಜುವೇಂದ್ರ ಚಹಾಲ್ (1-34)ತಲಾ ಒಂದು ವಿಕೆಟ್ ಪಡೆದರು.