ಸಾಮಾಜಿಕ ಮಾಧ್ಯಮವನ್ನು ತೊರೆಯುವ ಬಗ್ಗೆ ಮೌನ ಮುರಿದ ಆಮಿರ್ ಖಾನ್

Update: 2021-03-17 17:24 GMT

ಮುಂಬೈ,ಮಾ.17: ಸೋಮವಾರ ತನ್ನ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನಟ ಆಮಿರ್ ಖಾನ್ ಅವರು ಸಾಮಾಜಿಕ ಮಾಧ್ಯಮವನ್ನು ತೊರೆಯಲು ತಾನು ನಿರ್ಧರಿಸಿದ್ದೇನೆ ಮತ್ತು ತನ್ನ ಭವಿಷ್ಯದ ಯೋಜನೆಗಳ ಕುರಿತು ಅಪ್‌ಡೇಟ್‌ಗಳು ತನ್ನ ನಿರ್ಮಾಣ ಸಂಸ್ಥೆಯ ಅಧಿಕೃತ ಖಾತೆಯಲ್ಲಿ ಲಭ್ಯವಿರುತ್ತವೆ ಎಂದು ಪ್ರಕಟಿಸಿದ್ದರು. ಇದೇ ವೇಳೆ ತನಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದ ತನ್ನ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಥ್ಯಾಂಕ್ಸ್ ಕೂಡ ಹೇಳಿದ್ದರು. ಖಾನ್ ಅವರ ಈ ದಿಢೀರ್ ನಿರ್ಧಾರ ಅವರ ಅಭಿಮಾನಿಗಳನ್ನು ಗೊಂದಲದಲ್ಲಿ ಮುಳುಗಿಸಿತ್ತು. ಫೇಸ್‌ಬುಕ್,ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ಗಳನ್ನು ತೊರೆಯುವ ತನ್ನ ನಿರ್ಧಾರದ ಬಗ್ಗೆ ಖಾನ್ ಇದೀಗ ಮೌನ ಮುರಿದಿದ್ದಾರೆ.

ಮಂಗಳವಾರ ಖಾನ್ ತಾನು ವಿಶೇಷ ಪಾತ್ರದಲ್ಲಿ ನಟಿಸಿರುವ ‘ಕೊಯಿ ಜಾನೆ ನಾ’ ಚಿತ್ರದ ಸ್ಕ್ರೀನಿಂಗ್‌ಗೆ ಹಾಜರಾಗಿದ್ದರು. ಅಲ್ಲಿಂದ ಹೊರಬೀಳುತ್ತಿದ್ದಾಗ ಅವರನ್ನು ಮುತ್ತಿಕೊಂಡ ಪಾಪರಾಝಿಗಳು ಸಾಮಾಜಿಕ ಮಾಧ್ಯಮವನ್ನು ತೊರೆಯುವ ನಿರ್ಧಾರದ ಬಗ್ಗೆ ಪ್ರಶ್ನಿಸಿದ್ದರು. ತನ್ನ ನಿರ್ಧಾರದ ಬಗ್ಗೆ ಊಹಾಪೋಹಗಳಿಂದ ದೂರವಿರುವಂತೆ ಅವರಿಗೆ ಸೂಚಿಸಿದ ಖಾನ್,‘ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟೇನೂ ಸಕ್ರಿಯವಾಗಿರಲಿಲ್ಲ. ಈಗ ನಾನು ಮಾಧ್ಯಮಗಳ ಮೂಲಕವೇ ತನ್ನ ವೀಕ್ಷಕರನ್ನು ಸಂಪರ್ಕಿಸುವುದರಿಂದ ಅವುಗಳು ಸಂತೋಷ ಪಡಬೇಕು. ಮಾಧ್ಯಮಗಳ ಪಾತ್ರ ಈಗ ದೊಡ್ಡದಾಗಿದೆ. ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ನಂಬಿದ್ದೇನೆ ’ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News