ನಾಲ್ಕನೇ ಟ್ವೆಂಟಿ-20: ಇಂಗ್ಲೆಂಡ್ ಗೆಲುವಿಗೆ 186 ರನ್ ಗುರಿ

Update: 2021-03-18 15:39 GMT

ಅಹಮದಾಬಾದ್: ಅಗ್ರ ಸರದಿಯ ಆಟಗಾರ ಸೂರ್ಯ ಕುಮಾರ್ ಯಾದವ್ ಅರ್ಧಶತಕದ(57, 31 ಎಸೆತ, 6 ಬೌಂಡರಿ, 3 ಸಿಕ್ಸರ್)ಕೊಡುಗೆಯ ನೆರವಿನಿಂದ ಭಾರತ ತಂಡ ನಾಲ್ಕನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ  ಇಂಗ್ಲೆಂಡ್ ಗೆಲುವಿಗೆ 186 ರನ್ ಗುರಿ ನೀಡಿದೆ.

ಗುರುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(12) ಹಾಗೂ ರಾಹುಲ್ (14)ಉತ್ತಮ ಆರಂಭ ಒದಗಿಸಲು ವಿಫಲರಾದರು. ನಾಯಕ ವಿರಾಟ್ ಕೊಹ್ಲಿ 5 ಎಸೆತ ಎದುರಿಸಿದರೂ ಕೇವಲ 1 ರನ್ ಗಳಿಸಿ ರಶೀದ್ ಗೆ ವಿಕೆಟ್ ಒಪ್ಪಿಸಿದರು.

ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ (30)ಹಾಗೂ ಶ್ರೇಯಸ್ ಅಯ್ಯರ್ (37)ಎರಡಂಕೆಯ ಸ್ಕೋರ್ ಗಳಿಸಿದರು.

ಇಂಗ್ಲೆಂಡ್ ಪರವಾಗಿ ವೇಗಿ ಜೋಫ್ರಾ ಆರ್ಚರ್ (4-33)ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಯಾಮ್ ಕರನ್(1-16), ಸ್ಟೋಕ್ಸ್(1-26), ವುಡ್(1-25) ಹಾಗೂ ರಶೀದ್ (1-39)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News