‘ಸರಿಯಾದ ಸಮಯದಲ್ಲಿ’ ಬೈಡನ್‌ರಿಂದ ಪುಟಿನ್ ಭೇಟಿ: ಶ್ವೇತಭವನ

Update: 2021-03-20 16:44 GMT

ವಾಶಿಂಗ್ಟನ್, ಮಾ. 20: ಅಮೆರಿಕ ಅಧ್ಯಕ್ಷ ಜೋ ಬೈಡನ್ ‘ಸರಿಯಾದ ಸಮಯದಲ್ಲಿ’ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತಭವನ ಶುಕ್ರವಾರ ತಿಳೀಸಿದೆ.

ರಶ್ಯ ಅಧ್ಯಕ್ಷ ಓರ್ವ ಕೊಲೆಗಾರ ಎಂಬುದಾಗಿ ನಾನು ಭಾವಿಸಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಬೈಡನ್ ದೊಡ್ಡ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.

‘‘ಅವರು ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ’’ ಎಂದು ಶ್ವೇತಭವನದ ವಕ್ತಾರೆ ಕ್ಯಾರಿನ್ ಜೀನ್-ಪಿಯರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಮುಂದಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷರು ನನ್ನೊಂದಿಗೆ ನೇರಪ್ರಸಾರದ ಚರ್ಚೆಗೆ ಬರಬೇಕು ಎಂಬುದಾಗಿ ಪುಟಿನ್ ಗುರುವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News